ಸಾರಿಗೆ-ಖಾಸಗಿ ಬಸ್ ಸಿಬ್ಬಂದಿಗಳ ವಾಗ್ವಾದ

0
72

ಉಪ್ಪಳ: ಉಪ್ಪಳದಿಂದ ಕೈಕಂಬ-ಬಾಯಾರು ಮೂಲಕ ಪುತ್ತೂರಿಗೆ ತೆರಳುವ ಸಾರಿಗೆ ಹಾಗೂ ಖಾಸಗಿ ಬಸ್‌ಗಳ ಸಿಬ್ಬಂದಿಗಳ ಮಧ್ಯೆ ನಿನ್ನೆ ಲಾಲ್‌ಭಾಗ್‌ನಲ್ಲಿ ವಾಗ್ವಾದ ನಡೆದಿದ್ದು ಇದರಿಂದ ಅಲ್ಪಹೊತ್ತು ದಿಗ್ಭ್ರಾಂತಿಯ ವಾತಾವರಣ ಸೃಷ್ಟಿಯಾಯಿತು. ಕರ್ನಾಟಕ ರಾಜ್ಯ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ನಿನ್ನೆ ಸಂಜೆ ಉಪ್ಪಳದಿಂದ ಪ್ರಯಾಣ ಹೊರಟು ೫.೩೦ಕ್ಕೆ ಲಾಲ್‌ಭಾಗ್‌ಗೆ ತಲುಪಿದೆ. ಈ ವೇಳೆ ಖಾಸಗಿ ಬಸ್‌ನ್ನು ಹಿಂದಿಕ್ಕಿ ಸಾರಿಗೆ ಬಸ್ ಮುಂದೆ ಸಾಗಿದ್ದು ಇದರಿಂದ ಖಾಸಗಿ ಬಸ್‌ಗೆ ಅಲ್ಪ ಹಾನಿಯುಂಟಾಗಿರುವುದಾಗಿ ದೂರಲಾಗಿದೆ. ಇದರಿಂದ ಎರಡು ಬಸ್‌ಗಳ ನೌಕರರ ಮಧ್ಯೆ ವಾಗ್ವಾದ ನಡೆದಿದೆ. ಈ ಕಾರಣದಿಂದ ಈ ಬಸ್‌ಗಳ ಪ್ರಯಾಣ ಮೊಟಕುಗೊಂಡಿದ್ದು ಪ್ರಯಾಣಿಕರು ಸಮಸ್ಯೆಗೀಡಾದರು. ಬಳಿಕ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ಎರಡು ಬಸ್‌ಗಳನ್ನು ಠಾಣೆಗೆ ಕೊಂಡೊಯ್ದಿದ್ದಾರೆ. ಸಮಯ ಸಂಬಂಧ ತರ್ಕವೇ ಘಟನೆಗೆ ಕಾರಣವೆನ್ನಲಾಗಿದೆ.

NO COMMENTS

LEAVE A REPLY