ಪೆಟ್ರೋಲ್ನಲ್ಲಿ ಡೀಸೆಲ್ ಮಿಶ್ರಣ: ಪೆಟ್ರೋಲ್ ಬಂಕ್ನಲ್ಲಿ ವಾಹನ ಮಾಲಕರಿಂದ ಗಲಾಟೆ

0
244

ಮಂಜೇಶ್ವರ: ಪೆಟ್ರೋಲ್‌ನಲ್ಲಿ ಡೀಸೆಲ್ ಮಿಶ್ರಣಗೊಂಡಿದೆ ಎಂದು ಆರೋಪಿಸಿ ಹಲವಾರು ವಾಹನ ಮಾಲ ಕರು ನಿನ್ನೆ ವಾಮಂಜೂರು ಚೆಕ್‌ಪೋಸ್ಟ್‌ನ ಲ್ಲಿರುವ ಪೆಟ್ರೋಲ್ ಬಂಕ್‌ಗೆ ತಲುಪಿ ಗಲಾಟೆ ಮಾಡಿದ ಘಟನೆ ನಡೆದಿದೆ. ಇಲ್ಲಿಂದ ನಿನ್ನೆ ಅಪರಾಹ್ನ ಬಂದ್ಯೋಡು ಶಿರಿಯ ನಿವಾಸಿ ಮೊಹಮ್ಮದ್ ಬಿ. ಕೆ. ತನ್ನ ಕಾರಿಗೆ ಪೆಟ್ರೋಲ್ ಹಾಕಿದ್ದು, ಆ ಬಳಿಕ ಮಂಗಳೂರಿಗೆ ತೆರಳುವ ಮಧ್ಯೆ ಕಾರಿನಲ್ಲಿ ಸಂಚಾರ ತೊಂದರೆ ಕಂಡು ಬಂದಿದೆ. ಇದರಿಂದಾಗಿ ಕುಂಜತ್ತೂರು ಗ್ಯಾರೇಜ್‌ನಲ್ಲಿ ಪರಿಶೀಲಿಸಿದಾಗ ಪೆಟ್ರೋಲ್ ಜೊತೆ ಡೀಸೆಲ್ ಬೆರೆದಿ ರುವುದಾಗಿ ತಿಳಿದು ಬಂದಿದ್ದು ಕೂq ಲೇ ಪೆಟ್ರೋಲ್ ಬಂಕ್‌ಗೆ ಬಂದು ವಿಚಾರಿಸಿದರು. ಇದೇ ವೇಳೆ ಇಲ್ಲಿಗೆ ಇದೇ ರೀತಿಯಲ್ಲಿ ಹಲವು ವಾಹನ ಗಳು ತಲುಪಿದ್ದು, ತಮ್ಮ ವಾಹನಗಳಿಗೆ ಹಾನಿಯಾಗಿದೆ ಎಂದು ಮಾಲಕರು ಗಲಾಟೆಗೆ ತೊಡಗಿದರು.  ಈ ವೇಳೆ ಪೆಟ್ರೋಲ್ ಬಂಕ್‌ನ ಮೆನೇಜರ್ ವಾಹನ ಮಾಲಕರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದು, ಬಳಿಕ ವಾಹನ ಮಾಲಕರು ತೆರಳಿದರೆನ್ನಲಾಗಿದೆ.

NO COMMENTS

LEAVE A REPLY