ಫ್ಲಾಟ್ ಬಳಿ ನಿಲ್ಲಿಸಲಾದ ಬೈಕ್‌ಗೆ ಕಿಚ್ಚಿಟ್ಟು ನಾಶ: ಕೇಸು ದಾಖಲು

0
30

ಮಂಜೇಶ್ವರ: ಫ್ಲಾಟ್‌ನ ಶೆಡ್‌ನಲ್ಲಿರಿ ಸಲಾಗಿದ್ದ ಬುಲೆಟ್ ಬೈಕ್‌ಗೆ ಕಿಚ್ಚಿಟ್ಟು ನಾಶಪಡಿಸಿದ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಬಳಿಯ ಬಪ್ಪಾಯಿತೊಟ್ಟಿ ಬಾತಿಷ ಮಂಜಿಲ್‌ನ ಮೊಯ್ದೀನ್ ಅಬ್ಬಾಸ್‌ರ ಪುತ್ರ ಹನಫಿ ಬಜಾರ್‌ನಲ್ಲಿ ಹೋಟೆಲ್ ವ್ಯಾಪಾರಿ ಅಮೀರ್ ಬಿ.ಎಂ (೩೫) ಎಂಬ ವರ ಬೈಕ್‌ನ್ನು ಕಿಚ್ಚಿಟ್ಟು ನಾಶಗೊಳಿಸಲಾ ಗಿದೆ. ಮೊನ್ನೆ ರಾತ್ರಿ ೧೧ ಗಂಟೆ ಬಳಿಕ ಘಟನೆ ನಡೆದಿದೆ. ಬೈಕ್‌ನ ಬಳಿ ಪ್ಲಾಸ್ಟಿಕ್ ಬಾಟಲಿ ಪತ್ತೆಯಾಗಿದೆ. ಪೆಟ್ರೋಲ್ ಸುರಿದು ಬೈಕ್‌ಗೆ ಕಿಚ್ಚಿಡಲಾಗಿದೆ ಯೆಂದು ಅಮೀರ್ ದೂರಿದ್ದಾರೆ. ಒಂದೂವರೆ ಲಕ್ಷ ರೂ. ನಷ್ಟ ಸಂಭವಿ ಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY