ಮಂಜೇಶ್ವರ ಪರಿಸರದಲ್ಲಿ ೬ ಕಡೆ ಬೆಂಕಿ ಆಕಸ್ಮಿಕ: ಪೊದೆ, ಹುಲ್ಲು ನಾಶ

0
21

ಉಪ್ಪಳ: ಮಂಜೇಶ್ವರ ಪರಿಸರದ ೬ ಕಡೆಗಳಲ್ಲಿ ನಿನ್ನೆ ಬೆಂಕಿ  ಆಕಸ್ಮಿಕ ಸಂಭವಿಸಿದೆ. ಆದರೆ ಪೊದೆ, ಹುಲ್ಲು ಹೊತ್ತಿ ನಾಶವಾಗಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಬೆಳಿಗ್ಗೆ ಆರ್‌ಟಿಒ ಚೆಕ್ ಪೋಸ್ಟ್ ಬಳಿಯ ಹೆದ್ದಾರಿ ಪಕ್ಕದ ಹುಲ್ಲಿಗೆ ಬೆಂಕಿ ತಗಲಿದ್ದರೆ, ಮಧ್ಯಾಹ್ನ ಉಪ್ಪಳ ಪೆಟ್ರೋಲ್ ಬಂಕ್ ಪರಿಸರದ ವ್ಯಕ್ತಿಯೋರ್ವರ ಹಿತ್ತಿಲಿಗೆ ಬೆಂಕಿ ತಗಲಿ ಹುಲ್ಲು ನಾಶವಾಗಿದೆ. ಅಪರಾಹ್ನ ಪಚ್ಚಂಬಳದಲ್ಲಿ  ಸರಕಾರಿ ಭೂಮಿಯಲ್ಲಿದ್ದ ಹುಲ್ಲಿಗೆ, ಆ ಬಳಿಕ ಕಡಂಬಾರುಕಟ್ಟೆ ಸರಕಾರಿ ಸ್ಥಳದಲ್ಲಿದ್ದ ಕಾಡುಪೊದೆ, ಮಂಜೇಶ್ವರ ಬೆಜ್ಜಂಪಾಡಿಯಲ್ಲಿ, ಕಡಂಬಾರಿನಲ್ಲಿ ಸರಕಾರಿ ಸ್ಥಳದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.  ಈ ಕಡೆಗಳಿಗೆಲ್ಲ ಉಪ್ಪಳ ಅಗ್ನಿಶಾಮಕದಳದ ಎರಡು ತಂಡ ಧಾವಿಸಿ ಬೆಂಕಿ ನಂದಿಸಿದೆ. ಸ್ಟೇಷನ್ ಆಫೀಸರ್ ಪ್ರಕಾಶ್ ಕುಮಾರ್, ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಜಾರ್ಜ್ ನೇತೃತ್ವ ನೀಡಿದರು.

NO COMMENTS

LEAVE A REPLY