ಶಬರಿಮಲೆ ಯುವತಿ ಪ್ರವೇಶ: ಸುಪ್ರೀಂಕೋರ್ಟ್‌ನಲ್ಲಿ ವಾದ ಆರಂಭ

0
24

ಹೊಸದಿಲ್ಲಿ: ಶಬರಿಮಲೆಗೆ ಯುವತಿಯರ ಪ್ರವೇಶ ಅವಕಾಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಗಳು ಮತ್ತು ಇತರ ವಿಷಯಗಳ ಮೇಲಿನ ವಾದ  ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ  ಸದಸ್ಯರ ಸಂವಿಧಾನ ಪೀಠದಲ್ಲಿ ಇಂದು ಬೆಳಿಗ್ಗೆ ಆರಂ ಭಗೊಂಡಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎನ್. ನಾಗೇ ಶ್ವರ್ ರಾವ್, ಎಂ.ಎಂ. ಶಾಂ ತನ ಗೌಡರ್, ಎನ್.ಎ. ನಸೀರ್, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ, ಸೂರ್ಯಕಾಂತ್, ಆರ್. ಭಾನುಮತಿ ಎಂಬವರು ಈ ಅರ್ಜಿಗಳನ್ನು ವಿಚಾರಣೆ ನಡೆಸುವ ಸಂವಿಧಾನ ಪೀಠದ ಇತರ ಸದಸ್ಯರಾಗಿದ್ದಾರೆ. ಇಂದು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಏಳು ವಿಷಯಗಳನ್ನು ಮಾತ್ರವೇ ನ್ಯಾಯಾಲ ಯ ವಿಚಾರಣೆಗೆ ಕೈಗೆತ್ತಿಕೊಂ ಡಿದೆ.  ಆ ಬಳಿಕವಷ್ಟೇ ಮರುಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಯಲಿದೆ.

ಮರುಪರಿಶೀಲನಾ ಅರ್ಜಿಗಳನ್ನು ಕಳೆದ ನವೆಂಬರ್ ೧೪ರಂದು ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಪಂಚ ಸದಸ್ಯ ಪೀಠ ಪರಿಶೀಲಿಸಿತ್ತು. ಇದು ಧಾರ್ಮಿಕ ಸ್ವಾತಂತ್ರ್ಯ, ಆಚಾರ ಮತ್ತು ಧಾರ್ಮಿಕ ಭಾವನಾತ್ಮಕವಾದ ಅತ್ಯಂತ ಸೂಕ್ಷ್ಮ ವಿಷಯವಾಗಿದೆಯೆಂದು ಹೇಳಿದ ನ್ಯಾಯಾಲಯ ನಂತರ ಎಲ್ಲಾ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಸಪ್ತ ಸದಸ್ಯ ವಿಸ್ತೃತ ಪೀಠಕ್ಕೆ ಹಸ್ತಾಂತರಿಸಿತ್ತು. ನಂತರ ಅರ್ಜಿಗಳ ವಿಚರಣೆ ಸಪ್ತ ಸದಸ್ಯ ಪೀಠದ ಬದಲು ನವಸದಸ್ಯರ ಪೀಠಕ್ಕೆ ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ಎ. ಬೋಬ್ಡೆ ರೂಪು ನೀಡಿದ್ದರು.

ಶಬರಿಮಲೆಗೆ ಯುವತಿ ಪ್ರವೇಶದ ಹೊರತಾಗಿ ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶ, ಇತರ ಸಮುದಾಯದವರೊಂದಿಗೆ ವಿವಾಹವಾಗುವ ಪಾರ್ಸಿ ಮಹಿಳೆ ಯರಿಗೆ ಆರಾಧನಾಲಯಗಳಿಗೆ ಹೇರಲಾಗಿರುವ ಪ್ರವೇಶ ನಿಷೇಧ, ಬೋರಾ ಸಮುದಾಯಕ್ಕೆ ಸೇರಿದ ಯುವತಿಯರಿಗೆ ಕೆಲವು ವಿಷಯ ದಲ್ಲಿ ಹೇರಲಾಗಿರುವ   ನಿಷೇಧ ಇತ್ಯಾದಿ ವಿಷಯಗಳನ್ನು ಸುಪ್ರೀಂ ಕೋರ್ಟ್‌ನ ನವಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಮಾತ್ರವಲ್ಲ ಮತೀಯ ಆಚಾರ ನ್ಯಾಯಾಲ ಯಕ್ಕೆ ನಿರ್ಣಯಿಸಬಹುದೇ ಎಂಬುವುದನ್ನು ನ್ಯಾಯಾಲಯ ಪ್ರಧಾನವಾಗಿ ಪರಿಶೀಲಿಸಲಿದೆ.  ೬೦ ಮರುಪರಿಶೀಲನಾ ಅರ್ಜಿಗಳು  ಸಲ್ಲಿಸಲ್ಪಟ್ಟಿವೆ. ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಮುಂದೆ ನೀಡಲಿರುವ ತೀರ್ಪನ್ನು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.

 

NO COMMENTS

LEAVE A REPLY