ವಿದ್ಯಾರ್ಥಿನಿಯರಿಗೆ ಕಿರುಕುಳ ಯತ್ನ: ಆರೋಪಿ ವಿರುದ್ಧ ನಾಲ್ಕು ಕೇಸು ದಾಖಲು

0
31

ಕಾಸರಗೋಡು: ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತ ಶಾಲಾ ಪ್ಯೂನ್ ವಿರುದ್ಧ ಒಟ್ಟು ನಾಲ್ಕು ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.  ಬಂಬ್ರಾಣ ನಿವಾಸಿ ಚಂದ್ರಶೇಖರ(೫೫) ಎಂಬಾತನ ವಿರುದ್ಧ ಈ ಕೇಸುಗಳನ್ನು ದಾಖಲಿ ಲಾಗಿದೆ. ಈತ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಪ್ಯೂನ್ ಆಗಿದ್ದಾನೆ. ಪ್ರತಿದಿನ ಬೆಳಿಗ್ಗೆ ೮ ಗಂಟೆಗೆ ಶಾಲೆಗೆ ತಲುಪುವ ಈತ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಲು ಯತ್ನಿಸಿರು ವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಲಭಿಸಿದ ದೂರಿನನ್ವಯ ಈತನನ್ನು  ಪೊಲೀಸರು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.

NO COMMENTS

LEAVE A REPLY