ದೇವಸ್ಥಾನದಲ್ಲಿ ಕಳವು: ದೇವರ ಚಿನ್ನದ ಕಿರೀಟ ಸಹಿತ ಆಭರಣಗಳನ್ನು ದೋಚಿದ ಕಳ್ಳರು

0
30

ಕಾಸರಗೋಡು: ದೇವಸ್ಥಾನಕ್ಕೆ ಕಳ್ಳರು ನುಗ್ಗಿ ದೇವರ ವಿಗ್ರಹದ ಚಿನ್ನದ ಕಿರೀಟ ಮತ್ತಿತರ ಆಭರಣಗಳನ್ನು ದೋಚಿದ್ದಾರೆ.

ಪಡನ್ನಕ್ಕಾಡ್ ಕಡಿಞ್ಞಾತ್ತೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಈ ಕಳವು ನಡೆದಿದೆ. ಶ್ರೀ ಕ್ಷೇತ್ರದ ಅರ್ಚಕರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗಲೇ ಕಳವು ನಡೆದ ವಿಷಯ  ಗಮನಕ್ಕೆ ಬಂದಿದೆ. ದೇಗುಲದ ಹೊರಗಡೆ ಮರದ ದಿಮ್ಮಿಯೊಂದನ್ನು ಇರಿಸಿ ಅದರ ಮೂಲಕ ಮೇಲೇರಿ ಹೆಂಚು ಸರಿಸಿ ದೇವಸ್ಥಾನದೊಳಗೆ ನುಗ್ಗಿದ್ದಾರೆ. ನಂತರ ಶ್ರೀಕ್ಷೇತ್ರದ ಗರ್ಭಗುಡಿಯ ಬಾಗಿಲು ಮುರಿದು ದೇವರ ವಿಗ್ರಹಕ್ಕೆ ತೊಡಿಸಲಾಗಿದ ೬.೫ ಪವನಿನ ಚಿನ್ನದ ಆಭರಣ ೩.೫ ಪವನಿನ ಚಿನ್ನದ ಕಿರೀಟ ಮತ್ತು ದೇವಸ್ಥಾನದ ಕಾಣಿಕೆ ಡಬ್ಬಿಗಳ ಹಣವನ್ನೂ ದೋಚಿದ್ದಾರೆ. ಮೇಲೇರಲು ಬಳಸಿದ ಮರದದಿಮ್ಮಿ ಕ್ಷೇತ್ರದ ಬಳಿ ಪತ್ತೆಯಾಗಿದೆ. ಈ ಬಗ್ಗೆ ನೀಡಲಾದ ದೂರಿನಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಮಾತ್ರವಲ್ಲ, ಬೆರಳಚ್ಚು ತಜ್ಞರು ಆಗಮಿಸಿ ಹಲವು ಬೆರಳಚ್ಚುಗಳನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY