ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಕೇರಳ ಸರಕಾರದಿಂದ ಸುಪ್ರೀಂಕೋರ್ಟ್‌ಗೆ ಸ್ಯೂಟ್ ಅರ್ಜಿ

0
26

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿ.ಎ.ಎ)ಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ಸರಕಾರ ಸುಪ್ರೀಂಕೋರ್ಟ್‌ಗೆ ಸ್ಯೂಟ್ ಅರ್ಜಿ ಸಲ್ಲಿಸಿದೆ. ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಮೊದಲ ರಾಜ್ಯವಾಗಿದೆ ಕೇರಳ.

ಸಿಎಎ ಪಕ್ಷಪಾತಕರವಾಗಿದೆಯ ಲ್ಲದೆ, ಪೌರನ ಮೂಲಭೂತ ಹಕ್ಕು ಉಲ್ಲಂ ಘಿಸಲಾಗಿದೆ ಎಂದು ಅರ್ಜಿ ಯಲ್ಲಿ ತಿಳಿಸ ಲಾಗಿದೆ. ಸಂವಿಧಾನದ ೧೩೨ನೇ ಪರಿಚ್ಛೇದ ಪ್ರಕಾರವಿರುವ ಸ್ಯೂಟ್ ಅರ್ಜಿ ಇದಾಗಿದೆ. ಸಿಪಿಎಂನ ಪಿ.ಬಿ. ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೆಲವು ದಿನಗಳ ಹಿಂದೆ ಹೊಸದಿಲ್ಲಿ ಸಂದರ್ಶಿಸಿದ್ದರು. ಆ ವೇಳೆ ಸಿಎಎ ಬಗ್ಗೆ ಅವರು ಕಾನೂನು ತಜ್ಞ ರೊಂದಿಗೆ ಸಮಾಲೋಚನೆ ನಡೆಸಿದ್ದರು. ಆ ಬಳಿಕ ಕೇರಳ ಸರಕಾರ ಸುಪ್ರೀಂಕೋ ರ್ಟ್‌ಗೆ ಸ್ಯೂಟ್ ಅರ್ಜಿ ಸಲ್ಲಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವು ಸಂಘಟ ನೆಗಳು ಮತ್ತು ರಾಜಕೀಯ ಪಕ್ಷಗಳು ಸೇರಿದಂತೆ  ಒಟ್ಟು ೬೦ರಷ್ಟು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಈಗಾಗಲೇ ಸಲ್ಲಿಸಲಾಗಿದೆ.

ಅವುಗಳ ವಿಚಾರಣೆ ಜನವರಿ ೨೩ರಂದು ಸುಪ್ರೀಂಕೋರ್ಟ್‌ನಲ್ಲಿ ಆರಂಭಗೊಳ್ಳಲಿರುವಂತೆಯೇ ಕೇರಳ ಸರಕಾರ ಈ ಸ್ಯೂಟ್ ಅರ್ಜಿ ಸಲ್ಲಿಸಿದೆ. ಕೇರಳ ಗೃಹಖಾತೆಯ ಹೊಣೆಗಾರಿಕೆ ಹೊಂದಿರುವ ಹೆಚ್ಚುವರಿ ಮುಖ್ಯ ಕಾರ್ಯ ಸುಪ್ರೀಂಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ನ ರಾಜ್ಯದ ಸ್ಟಾಂಡಿಂಗ್ ಕನ್ಸಲ್ ಜಿ. ಪ್ರಕಾಶ್ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಸಿ.ಎ.ಎ ಅಂಗೀಕ ರಿಸಿದ ಸಂಸತ್ತಿನ ಕ್ರಮ ಸಂವಿಧಾನದ ೧೪ನೇ ಪರಿಚ್ಛೇದದಂತೆ ನೀಡಲಾಗಿರುವ ಸಮಾನತೆಯ ಉಲ್ಲಂಘನೆಯಾಗಿದೆ. ಇದು ಮುಸ್ಲಿಂ ವಿಭಾಗದೊಂದಿಗೆ ಪಕ್ಷಪಾತ ನಿಲುವು ತಾಳಿದಂತಾಗುತ್ತದೆ ಎಂದೂ ಅರ್ಜಿಯಲ್ಲಿ ಕೇರಳ ಸರಕಾರ ತಿಳಿಸಿದೆ.  ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ಬಾಹಿರವಾದುದೆಂದೂ ಅದನ್ನು ರದ್ದುಪಡಿಸಬೇಕೆಂದು ಕೇರಳ ವಿಧಾನಸಭೆಯಲ್ಲಿ ಕಳೆದ ತಿಂಗಳು ಗೊತ್ತುವಳಿಯನ್ನು ಅಂಗೀಕರಿಸಿತ್ತು. ಅದಾದ ಬೆನ್ನಲ್ಲೇ ಕೇರಳ ಸರಕಾರ ಸ್ಯೂಟ್ ಸಲ್ಲಿಸಿ ಅರ್ಜಿ ಸಲ್ಲಿಸಿದೆ.

ಸಂಸತ್ತ್ ಅಂಗೀಕರಿಸಿದ ಸಿಎಎಗೆ ಭಾರತದ ಹೆಚ್ಚಿನ ರಾಜ್ಯಗಳು ವಿರೋಧ ವ್ಯಕ್ತಪಡಿಸಿದೆ. ಆಹಿನ್ನೆಲೆ ಯಲ್ಲಿ ಅದನ್ನು ಪರಿಗಣಿಸಬೇಕಾಗಿದೆ ಎಂದು ಅರ್ಜಿಯಲ್ಲಿ ಕೇರಳ ತಿಳಿಸಿದೆ. ಈ ಅರ್ಜಿಯಲ್ಲಿ ಇತರ ರಾಜ್ಯಗಳನ್ನು ಕಕ್ಷಿದಾರರಾಗಿ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಕೇರಳ ನಡೆಸುತ್ತಿದೆ.

NO COMMENTS

LEAVE A REPLY