ಬಿಜೆಪಿ ಮುಖಂಡನಿಗೆ ಕೊಲೆ ಬೆದರಿಕೆ: ಕೇಸು ದಾಖಲು

0
30

ಉಪ್ಪಳ: ಮಲ್ಲಂಗೈ ನಿವಾಸಿ ಬಿಜೆಪಿ ಮುಖಂಡ ವಿಜಯ ಕುಮಾರ್ ರೈಯವರಿಗೆ ವಾಟ್ಸಪ್, ಇಂಟರ್‌ನೆಟ್, ವಾಯ್ಸ್ ಸಂದೇಶದ ಮೂಲಕ ಕೊಲೆ ಬೆದರಿಕೆ ಒಡ್ಡಿದವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ತಿಂಗಳ ೨೮ರಿಂದ ಹಲವು ಬಾರಿಯಾಗಿ ವಿದೇಶದಿಂದ ಸಹಿತ ಕರೆ ಹಾಗೂ ಸಂದೇಶದಲ್ಲಿ ಬೆದರಿಕೆ ಒಡ್ಡಿದ ಬಗ್ಗೆ ವಿಜಯ ಕುಮಾರ್ ಕುಂಬಳೆ ಠಾಣೆಗೆ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಆರಂಭದಲ್ಲಿ ಮೊಹಮ್ಮದ್ ಇಕ್ಬಾಲ್ ಎಂಬಾತನ ಫೋನ್‌ನಿಂದ ಶಬ್ದ ಸಂದೇಶ ತಲುಪಿದ್ದು ಆ ಬಳಿಕ ಹಲವು ಬಾರಿ ಕರೆ, ಸಂದೇಶ ಲಭಿಸಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

NO COMMENTS

LEAVE A REPLY