ತೆಂಗಿನ ನಾರು ಕಾರ್ಖಾನೆ ಬಳಿ ಬೆಂಕಿ ಅನಾಹುತ

0
30

ಮಾನ್ಯ: ಕೊಲ್ಲಂಗಾನದಲ್ಲಿ ಕಾರ್ಯಾಚರಿಸುತ್ತಿರುವ ವೆಸ್ಟರ್ನ್ ಫೈಬರ್ ಮೋಡ್ ಎಂಬ ಹೆಸರಿನ ತೆಂಗಿನ ನಾರು ಉತ್ಪನ್ನ ಕಾರ್ಖಾನೆ ಪರಿಸರದಲ್ಲಿ ತೆಂಗಿನ ನಾರಿನ ರಾಶಿಗೆ ಅಪರಾಹ್ನ ಬೆಂಕಿ ತಗಲಿ ಅದೃಷ್ಟವಾತ್ ಭಾರೀ ಅನಾಹುತ ತಪ್ಪಿಹೋಗಿದೆ.ಬೆಂಕಿ ತಗಲಿದ ಬಗ್ಗೆ ಮಾಹಿತಿ ಪಡೆದ ಕಾಸರಗೋಡು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ತಲುಪಿದೆ. ಜೆ.ಸಿ.ಬಿ ಬಳಸಿ ಕಾರ್ಖಾನೆಯ ಸುತ್ತಲು ಬೆಂಕಿ ತಗಲಿದ್ದ ಮತ್ತು ಪಸರಿಸಿಕೊಂಡಿದ್ದ ತೆಂಗಿನ ನಾರುಗಳನ್ನು ಒಂದೆಡೆ ರಾಶಿ ಹಾಕಿ ಅದರ ಮೇಲೆ ಮಣ್ಣು ಹಾಕಿ ನೀರು ಹಾಯಿಸಿ ನಂದಿಸಲಾಯಿತು. ಬೆಂಕಿ ಕಾರ್ಖಾನೆಗೂ ವ್ಯಾಪಿಸುತ್ತಿದ್ದಲ್ಲಿ ಭಾರೀ ದೊಡ್ಡ ಅನಾಹುತ ಉಂಟಾಗುತ್ತಿತ್ತು. ಅದೃಷ್ಟವಶಾತ್ ಅದು ತಪ್ಪಿ ಹೋಗಿದೆ. ಇದೇ ಕಾರ್ಖಾನೆಗೆ ನಾಲ್ಕು ವರ್ಷಗಳ ಹಿಂದೆಯೂ ಬೆಂಕಿ ತಗಲಿತ್ತು.

NO COMMENTS

LEAVE A REPLY