ಎಸ್.ಡಿ.ಪಿ.ಐ-ಲೀಗ್ ಘರ್ಷಣೆ: ನಾಲ್ವರಿಗೆ ಗಾಯ; ಲೀಗ್ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು

0
31

ಎಡನೀರು: ಪೋಸ್ಟರ್ ಲಗತ್ತಿಸುವ ವಿಷಯದಲ್ಲಿ ಎಡನೀರಿನ ಲ್ಲಿ ಮುಸ್ಲಿಂಲೀಗ್ ಮತ್ತು ಎಸ್.ಡಿ. ಪಿ.ಐ ಕಾರ್ಯಕರ್ತರ ಮಧ್ಯೆ ಘರ್ಷಣೆ ಉಂಟಾಗಿ  ನಾಲ್ಕು ಮಂದಿ ಗಾಯ ಗೊಂಡ ಘಟನೆ ನಡೆದಿದೆ.

ಎಸ್.ಡಿ.ಪಿ.ಐ ಕಾರ್ಯಕರ್ತ ರಾದ ಎಡನೀರಿನ ಇರ್ಷಾದ್ ಸಿ.ಕೆ.(೨೮), ಅಬ್ದುಲ್ ಆಶಿಫ್(೨೫), ಇವರ ಸ್ನೇಹಿತ ರಶೀದ್(೨೮) ಮತ್ತು ಅಬ್ದುಲ್ ರಹಿ ಮಾನ್ ಎಂಬವರು ಗಾಯಗೊಂಡಿದ್ದು ಅವರನ್ನು ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳಿಕ ಆಶಿಫ್ ಮತ್ತು ರಶೀದ್‌ನನ್ನು ಮಂಗಳೂರಿಗೆ ಸಾಗಿಸಲಾಗಿದೆ.

ಈ ಬಗ್ಗೆ ಇರ್ಷಾದ್ ನೀಡಿದ ದೂರಿನಂತ ಮುಸ್ಲಿಂಲೀಗ್ ಕಾರ್ಯ ಕರ್ತರಾದ ಫೈಸಲ್ ಮತ್ತು ಮನಾಫ್ ಎಂಬವರ ವಿರುದ್ಧ ವಿದ್ಯಾನಗರ ಪೊಲೀಸರು ಕೊಲೆ ಯತ್ನ  ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಾದ  ಪೋಸ್ಟರ್ ಲಗತ್ತಿಸುವ ವಿಷಯದಲ್ಲಿ ಎಡನೀರಿನಲ್ಲಿ ನಿನ್ನೆ ಮುಸ್ಲಿಂಲೀಗ್ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತರ ಮಧ್ಯೆ ಮಧ್ಯಾಹ್ನ ಪರಸ್ಪರ ವಾಗ್ವಾದ ಉಂಟಾಗಿತ್ತು. ಅದಾದ ಬಳಿಕ ಎಡನೀರಿನಲ್ಲಿರುವ ಕ್ಲಬ್‌ವೊಂದರಲ್ಲಿ ನಿನ್ನೆ ರಾತ್ರಿ ೭ ಗಂಟೆಗೆ ಮತ್ತೆ ಘರ್ಷಣೆ ಉಂಟಾಗಿದೆ. ತಾವು ಕ್ಲಬ್‌ನಲ್ಲಿ ಕೇರಮ್ ಆಡುತ್ತಿದ್ದ ವೇಳೆ ಅಲ್ಲಿಗೆ ಮುಸ್ಲಿಂಲೀಗ್ ಕಾರ್ಯಕರ್ತರಿಬ್ಬರು ನುಗ್ಗಿ ಬಂದು ರಾಜಕೀಯ ದ್ವೇಷದ ಹೆಸರಲ್ಲಿ ಆಕ್ರಮಣ ನಡೆಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಇರ್ಷಾದ್ ಆರೋಪಿಸಿದ್ದಾರೆ.

NO COMMENTS

LEAVE A REPLY