ಬೆದರಿಕೆ ಒಡ್ಡಿ ಮನೆಗೆ ಕಲ್ಲು ತೂರಾಟ: ಕೇಸು ದಾಖಲು

0
30

ಮಧೂರು: ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಧೂರು ಚೇನಕ್ಕೋಡ್ ನಿವಾಸಿ ಸುರೇಶ್ ಸಿ.(೪೩) ಎಂಬವರು ಈ ಬಗ್ಗೆ ದೂರು ನೀಡಿದ್ದು  ವಿನೋದ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜನವರಿ ೧೩ರಂದು ಆರೋಪಿ ತಮ್ಮ ಹಿತ್ತಿಲಿಗೆ ಅಕ್ರಮವಾಗಿ ನುಗ್ಗಿ ಬೆದರಿಕೆ ಒಡ್ಡಿ ಮನೆ ಹೆಂಚಿಗೆ ಕಲ್ಲೆಸೆದು ೧೦೦೦ ರೂ. ನಷ್ಟ ಉಂಟು ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುರೇಶ್ ಆರೋಪಿಸಿದ್ದಾರೆ.

NO COMMENTS

LEAVE A REPLY