ಪ್ಲಾಸ್ಟಿಕ್ ಬಳಕೆ ನಿಷೇಧ ಉಲ್ಲಂಘಿಸುವವರಿಗೆ ದಂಡ ವಸೂಲಿ ಕ್ರಮಕ್ಕೆ ಚಾಲನೆ

0
27

ಕಾಸರಗೋಡು: ಮರುಬಳಕೆಗೆ ಸಾಧ್ಯವಾಗದ ಪ್ಲಾಸ್ಟಿಕ್ ಸಾಮಗ್ರಿಗಳ ಮೇಲೆ ರಾಜ್ಯ ಸರಕಾರ ಹೇರಿರುವ ನಿಷೇಧವನ್ನು ಉಲ್ಲಂಘಿಸುವವರಿಗೆ ಜುಲ್ಮಾನೆ ವಿಧಿಸುವ ಕ್ರಮಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ.

ಮರುಬಳಕೆ ಪ್ಲಾಸ್ಟಿಕ್ ಸಾಮಗ್ರಿಗಳ ಬಳಕೆಗೆ ಜನವರಿ ೧ರಿಂದ ರಾಜ್ಯ ಸರಕಾರ ನಿಷೇಧ ಹೇರಿದೆ. ಆದರೆ ಅದನ್ನು ಉಲ್ಲಂಘಿಸುವವರಿಗೆ ಜುಲ್ಮಾನೆ ವಸೂಲಿ ಮಾಡುವ ಕ್ರಮ ಜ.೧೫ರಿಂದ ಆರಂಭಿಸಲಾಗು ವುದೆಂದು  ಸರಕಾರ ತಿಳಿಸಿತ್ತು. ಅದರಂತೆ ಇದನ್ನು ಉಲ್ಲಂಘಿಸುವವ ರಿಗೆ ೧೦,೦೦೦ ರೂ. ನಿಂದ ೫೦,೦೦೦ ರೂ. ತನಕ ಜುಲ್ಮಾನೆ ವಸೂಲಿ ಮಾಡಲಾಗುವುದೆಂದು ಸರಕಾರ ತಿಳಿಸಿದೆ.  ಇದೇ ವೇಳೆ ಪ್ಲಾಸ್ಟಿಕ್ ಬಳಸುವ ಫಲಾನುಭವಿಗಳನ್ನು ಜುಲ್ಮಾನೆ ಕ್ರಮದಿಂದ ಹೊರತುಪಡಿಸಿ ಪ್ಲಾಸ್ಟಿಕ್ ಸಾಮಗ್ರಿಗಳ ಉತ್ಪಾದಕರು ಮತ್ತು ಮಾರಾಟಗಾರರಿಂದ ಮಾತ್ರ  ಜುಲ್ಮಾನೆ ವಸೂಲಿ ಮಾಡಿದರೆ ಸಾಕೆಂದು ಸರಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಇದರ ವಿರುದ್ಧ ಆರಂಭದಲ್ಲಿ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ವಿಷಯ ಈಗ ಹೈಕೋರ್ಟ್‌ನ ಪರಿಗಣನೆಯ ಲ್ಲಿದೆ. ಅದರಿಂದಾಗಿ ಪ್ಲಾಸ್ಟಿಕ್ ನಿಷೇ ಧವನ್ನು ಕಠಿಣವಾಗಿ ಜ್ಯಾರಿಗೊಳಿಸು ವಲ್ಲಿ ಸರಕಾರಕ್ಕೆ ಸಾಧ್ಯವಾಗದು.

NO COMMENTS

LEAVE A REPLY