ಕಾಸರಗೋಡು ಮಹಿಳಾ ಎಸ್‌ಐಯಾಗಿ ಅಜಿತಾ ನೇಮಕ

0
29

ಕಾಸರಗೋಡು:  ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐಯಾಗಿ ಅಜಿತರನ್ನು ನೇಮಿಸಲಾಗಿದೆ. ಇವರು ಎಸ್‌ಐ ಪರೀಕ್ಷೆ ಮೂಲಕ ಈ ಹುದ್ದೆಗೆ ನೇರವಾಗಿ ಆಯ್ಕೆಗೊಂಡವರಾಗಿದ್ದಾರೆ. ಮಾತ್ರವಲ್ಲ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಮೊದಲ ಮಹಿಳಾ ಎಸ್‌ಐಯೆಂಬ ವಿಶೇಷತೆಯನ್ನೂ ಇವರು ಹೊಂದಿದ್ದಾರೆ.

 ೩೭ ವರ್ಷದ ಇವರು ಕರಿವೆಳ್ಳೂರು ನಿವಾಸಿಯಾಗಿದ್ದಾರೆ. ಕಾಸರಗೋಡಿನಲ್ಲಿ ಈತನಕ ಕಾನ್‌ಸ್ಟೇಬಲ್ ಆಗಿ ಕ್ರಮೇಣ ಭಡ್ತಿಗೊಂಡವರನ್ನು ಮಹಿಳಾ ಎಸ್‌ಐಗಳನ್ನಾಗಿ ನೇಮಿಸಲಾಗುತ್ತಿತ್ತು. ಈಗ ಅಂತಹ ಕ್ರಮದ ಬದಲು ಈಗ ಮಹಿಳಾ ಎಸ್‌ಐ ಹುದ್ದೆಗೆ ನೇರ ನೇಮಕಾತಿ ನಡೆಸಲಾಗುತ್ತಿದೆ.

NO COMMENTS

LEAVE A REPLY