ಕನ್ನಡ ತಿಳಿಯದ ಅಧ್ಯಾಪಿಕೆ ಕನ್ನಡ ಮಾಧ್ಯಮದಲ್ಲಿ ನೇಮಕ: ಬೇಕಲದಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ

0
33

ಕಾಸರಗೋಡು: ಕನ್ನಡ ತಿಳಿಯದ ಅಧ್ಯಾಪಿಕೆಯನ್ನು ಕನ್ನಡ ಮಾಧ್ಯಮಕ್ಕೆ ನೇಮಕ ನಡೆಸಿದುದರ ವಿರುದ್ಧ ಬೇಕಲದಲ್ಲೂ ಪ್ರತಿಭಟನೆ ಉಂಟಾಗಿದೆ.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಧ್ಯಾಪಿಕೆಯನ್ನು ಪೊಲೀಸರ ಸಂರಕ್ಷಣೆಯಲ್ಲಿ ಶಾಲಾ ಕಚೇರಿಗೆ ತಲುಪಿಸಲಾಗಿದೆ. ಕನ್ನಡ ತಿಳಿಯದ ಅಧ್ಯಾಪಿಕೆಯನ್ನು  ಪಿಎಸ್‌ಸಿ ಕನ್ನಡ ಮಾಧ್ಯಮಕ್ಕೆ ನೇಮಕಾತಿ ನಡೆಸಿದೆಯೆನ್ನಲಾಗುತ್ತಿದೆ. ಇದರಿಂದ ಈ ನೇಮಕಾತಿಯನ್ನು ಹಿಂತೆಗೆದು ಕೊಳ್ಳಬೇಕೆಂದು ಒತ್ತಾಯಿಸಿ ಬೇಕಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

ಸಮಾಜವಿಜ್ಞಾನ ಕನ್ನಡ ವಿಭಾಗಕ್ಕೆ ಪಿಎಸ್‌ಸಿ ನಡೆಸಿದ ಅಧ್ಯಾಪಿಕೆಯ ನೇಮಕಾತಿ ವಿವಾದಕ್ಕೆಡೆಯಾಗಿದೆ. ಕನ್ನಡ ತಿಳಿಯದ ಅಧ್ಯಾಪಿಕೆಯ ನೇಮ ಕಾತಿಯನ್ನು ಅಂಗೀಕರಿಸು ವುದಿಲ್ಲವೆಂದು  ವಿದ್ಯಾರ್ಥಿಗಳು ಈ ಹಿಂದೆಯೇ ತಿಳಿಸಿದ್ದರು. ಆದರೆ ಪಿಎಸ್‌ಸಿ  ನಡೆಸಿದ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ತೆಂಕಣ ಜಿಲ್ಲೆಯ ನಿವಾಸಿಯಾದ ಅಧ್ಯಾಪಿಕೆ ನೇಮಕಕೊಂಡಿದ್ದಾರೆ.  ಅಧ್ಯಾಪಿಕೆ ಇಂದು ಶಾಲೆಗೆ ತಲುಪುವರೆಂದು ತಿಳಿದ ವಿದ್ಯಾರ್ಥಿಗಳು ಗೇಟ್ ಬಳಿ ಕಾದು  ನಿಂತಿದ್ದರು. ಅಧ್ಯಾಪಿಕೆ ತಲುಪಿದೊಡನೆ ಕನ್ನಡ ತಿಳಿಯದ ಅಧ್ಯಾಪಿಕೆ ಮರಳಿ ಹೋ ಗಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಇದರಿಂದ ಬೇಕಲ ಎಸ್‌ಐ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ಅಧ್ಯಾಪಿಕೆಯನ್ನು ಶಾಲೆಗೆ ಪ್ರವೇಶಿಸಲು ಅವಕಾಶ ವೊದಗಿ ಸಬೇಕೆಂದು  ಆಗ್ರಹಪಟ್ಟರು. ಆದರೆ ಇದಕ್ಕೆ ವಿದ್ಯಾರ್ಥಿಗಳು ತಯಾ ರಾಗಲಿಲ್ಲ. ಇದರಿಂದ ಪೊಲೀಸ್ ಸಂರಕ್ಷಣೆಯಲ್ಲಿ ಅಧ್ಯಾಪಿಕೆಯನ್ನು ಶಾಲಾ ಕಚೇರಿಗೆ ತಲುಪಿಸಲಾಗಿದೆ. ವಿಷಯ ತಿಳಿದು ರಕ್ಷಕರು, ನಾಗರಿಕರ ಸಹಿತ ಹಲವರು ಶಾಲೆ ಪರಿಸರಕ್ಕೆ ತಲುಪಿದ್ದಾರೆ. ಸ್ಥಳದಲ್ಲಿ ಪೊಲೀಸ್ ಕಾವಲು ಏರ್ಪಡಿ ಸಲಾಗಿದೆ.

NO COMMENTS

LEAVE A REPLY