ಎ.ಎಸ್.ಐ ಗುಂಡಿಕ್ಕಿ ಕೊಲೆ: ಉಡುಪಿಯಿಂದ ಸೆರೆಗೀಡಾದ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ತೀರ್ಮಾನ

0
46

 

ತಿರುವನಂತಪುರ: ತಿರುವನಂತಪುರದ ಗಡಿಯಲ್ಲಿ ತಮಿಳುನಾಡಿನ ಕಳಿಯಕಾವಿಲ್ ತಪಾಸಣಾ ಕೇಂದ್ರದಲ್ಲಿ ಕಳೆದ ಬುಧವಾರ ರಾತ್ರಿ ಕರ್ತವ್ಯದಲ್ಲಿದ್ದ ಎ.ಎಸ್.ಐ ವಿನ್ಸನ್‌ರನ್ನು ಗುಂಡಿಕ್ಕಿ ಕೊಲೆಗೈದ ಪ್ರಕರಣದಲ್ಲಿ  ಉಡುಪಿಯಿಂದ ಸೆರೆಗೀಡಾದ ಉಗ್ರಗಾಮಿ ಸಂಘಟನೆಯ ಇಬ್ಬರಿಗೆ ಕೇರಳದಿಂದಲೂ ಸಹಾಯ ಲಭಿಸಿದ ಬಗ್ಗೆ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.

ತಿರುವಿದಾಂಕೋಡು ನಿವಾಸಿಗಳಾದ ಅಬ್ದುಲ್ ಸೆಮೀಂ (೨೯) ಮತ್ತು ತೌಫಿಕ್ (೨೭) ಪೊಲೀಸರ ವಶಕ್ಕೊಳಗಾದ ಆರೋಪಿಗಳಾಗಿದ್ದಾರೆ. ತಮಿಳುನಾಡು ಕ್ಯೂ ಬ್ರಾಂಚ್ ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಹಾಗೂ ಎನ್‌ಐಎ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ಉಡುಪಿ ರೈಲು ನಿಲ್ದಾಣದಿಂದ ಸೆರೆಹಿಡಿಯಲಾಗಿದೆ. ಇವರನ್ನು ಮೊದಲು ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಕಚೇರಿಗೆ ಸಾಗಿಸಿ ಸಮಗ್ರ ತನಿಖೆ ನಡೆಸಿದ ಬಳಿಕ ತಮಿಳುನಾಡಿಗೆ ಸಾಗಿಸಲಾಗಿದೆ. ಅವರನ್ನು ಸಮಗ್ರ ವಿಚಾರಣೆಗೊಳಪಡಿಸಲಾಗುತ್ತಿದೆ.  ಬಂಧಿತ ಆರೋಪಿಗಳು ಉಗ್ರಗಾಮಿ ಸಂಘಟನೆಗಳೊಂದಿಗೆ ನಿಕಟ ನಂಟು ಹೊಂದಿರುವುದಾಗಿ ಪೊಲೀಸರು ಈ ಹಿಂದೆಯೇ ಖಾತರಿಪಡಿಸಿದ್ದರು. ಇವರು ಮಾರಕಾಯುಧ ತರಬೇತಿಯನ್ನು ಪಡೆದಿದ್ದಾರೆ. ಈ ತಂಡದಲ್ಲಿ ೧೨ ಮಂದಿ ಒಳಗೊಂಡಿದ್ದಾರೆ. ಎ.ಎಸ್.ಐ ವಿನ್ಸನ್‌ರನ್ನು ಕೊಲೆಗೈಯ್ಯಲು ಆರೋಪಿಗಳು ಬಳಸಿದ್ದ ಬಂದೂಕನ್ನು ಅವರಿಗೆ ಇಜಾಸ್ ಪಾಶಾ ಎಂಬಾತನನ್ನು ಬೆಂಗಳೂರು ಪೊಲೀಸರು ಕೆಲವು ದಿನಗಳ ಹಿಂದೆ ಬಂಧಿಸಿದ್ದರು. ಆತನನ್ನು ಸಮಗ್ರವಾಗಿ ವಿಚಾರಿಸಿದಾಗ ಕೊಲೆ ಪ್ರಕರಣದ ಪೂರ್ಣ ಮಾಹಿತಿ ಮತ್ತು ಅದರಲ್ಲಿ ಶಾಮೀಲಾಗಿರುವ ಆರೋಪಿಗಳ ಬಗ್ಗೆ ಪೂರ್ಣ ಮಾಹಿತಿ ಲಭಿಸಿತ್ತು. ಕೊಲೆಗೆ ಬಳಸಿದ್ದ ಬಂದೂಕನ್ನು ಮುಂಬೈಯಿಂದ ಪಡೆಯಲಾಗಿತ್ತೆಂದು ಇಜಾಸ್ ಪಾಶಾ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.

ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಅಲ್ ಉಲಾಮದ ಹೊಸ ರೂಪವಾದ ತಮಿಳುನಾಡು ನ್ಯಾಷನಲ್  ಲೀಗ್‌ನ ಕಾರ್ಯಕರ್ತನಾಗಿದ್ದಾನೆ ಇಜಾಸ್  ಎಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY