ಮಹಿಳೆಯ ಮಾನಭಂಗ: ಆರಿಕ್ಕಾಡಿ ನಿವಾಸಿ ವಿರುದ್ಧ ಪೋಕ್ಸೋ ಸಹಿತ ಎರಡು ಕೇಸು ದಾಖಲು

0
85

ಕುಂಬಳೆ: ೩೨ರ ಹರೆಯದ ಮಹಿಳೆಯನ್ನು ಬೆದರಿಸಿ ಮಾನಭಂಗಪಡಿಸಿದ ಬಗ್ಗೆ ನೀಡಿದ ದೂರಿನಂತೆ ಓರ್ವನ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದೇ ವ್ಯಕ್ತಿ ವಿರುದ್ಧ ೩ ತಿಂಗಳ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಕೇಸು ದಾಖಲಿಸಲಾಗಿದೆ. ಆರಿಕ್ಕಾಡಿ ಕುನ್ನಿಲ್ ನಿವಾಸಿ ಅಬ್ದುಲ್ ಕರೀಂ (೪೦)ನ ವಿರುದ್ಧ ಕುಂಬಳೆ ಪೊಲೀಸರು ಈ ಎರಡು ಕೇಸು ದಾಖಲಿಸಿದ್ದಾರೆ. ಸಿಐ ರಾಜೀವನ್ ಈಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

೨೦೧೮ ಜುಲೈಯಿಂದ ೨೦೧೯ ಫೆಬ್ರವರಿ ಮಧ್ಯೆ ಮಹಿಳೆಯ ಮನೆಗೆ ತೆರಳಿ ಬೆದರಿಸಿ ಬಲತ್ಕಾರವಾಗಿ ಮಾನಭಂಗಪಡಿಸಿರುವುದಾಗಿ ದೂರಲಾಗಿದೆ.  ಇದೇ ವ್ಯಕ್ತಿ ೨೦೧೯ ಎಪ್ರಿಲ್‌ನಲ್ಲಿ ೩ ತಿಂಗಳ ಮಗುವಿಗೆ ಕಿರುಕುಳ ನೀಡಿರುವುದಾಗಿಯೂ ನೀಡಿದ ದೂರಿನಂತೆ ಪೋಕ್ಸೋ ಕೇಸು ದಾಖಲಿಸಲಾಗಿದೆ. ಈತನಿಗಾಗಿ ಹುಡುಕಾಟ ಆರಂಭಿಸಲಾಗಿದೆ.

NO COMMENTS

LEAVE A REPLY