ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ: ಮತದಾರ ಯಾದಿ ಬಗ್ಗೆ ಹೈಕೋರ್ಟ್ ತೀರ್ಪು ಇಂದು

0
17

ಕೊಚ್ಚಿ: ಈ ವರ್ಷದ ಸೆಪ್ಟಂ ಬರ್-ಅಕ್ಟೋಬರ್‌ನಲ್ಲಿ ಸ್ಥಳೀ ಯಾಡಳಿತ ಸಂಸ್ಥೆಗಳಿಗೆ ನಡೆಯ ಲಿರುವ ಚುನಾವಣೆಯಲ್ಲಿ ೨೦೧೫ರ ಮತದಾರ ಯಾದಿ ಬಳಸುವುದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿ ಯ ಮೇಲಿನ ತೀರ್ಪನ್ನು ಹೈಕೋ ರ್ಟ್ ವಿಭಾಗೀಯ ಪೀಠ ಇಂದು ನೀಡಲಿದೆ.

ಯುಡಿಎಫ್ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿತ್ತು. ಆಬಗ್ಗೆ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗದ ನಿಲುವನ್ನು ಕೇಳಿತ್ತು. ಹೈಕೋರ್ಟ್ ನೀಡುವ ತೀರ್ಪನ್ನು ಅಂಗೀಕರಿಸಲಾ ಗುವುದು. ನ್ಯಾಯಾಲಯದ ಆದೇಶ ನೀಡಿದ್ದಲ್ಲಿ ತಮ್ಮ ನಿಲುವನ್ನು ಮರುಪರಿಶೀಲಿಸಲಾಗುವುದೆಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ತಿಳಿಸಿತ್ತು.

೨೦೧೯ರ ಮತದಾರ ಯಾದಿ ಬಳಸಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕೆಂದು ಯುಡಿಎಫ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಗ್ರಹಿಸಿತ್ತು. ಆ ಅರ್ಜಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ತಳ್ಳಿಹಾಕಿತ್ತು. ಆ ತೀರ್ಪಿನ ವಿರುದ್ಧ ಯುಡಿಎಫ್ ಬಳಿಕ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

NO COMMENTS

LEAVE A REPLY