ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಕೇಸು ದಾಖಲು

0
22

ಕಾಸರಗೋಡು: ಗಲ್ಫ್ ಹಾಗೂ ಊರಿನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಯುವತಿ ನೀಡಿದ ದೂರಿನಂತೆ ಯುವಕನ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಾಞಂಗಾಡ್ ಆವಿ ನಿವಾಸಿ ಮೂಸ ಎಂಬಾತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಲ್ಫ್‌ನ ಸಂಸ್ಥೆಯೊಂ ದರಲ್ಲಿ ಉದ್ಯೋಗ ದೊರಕಿಸುವುದಾಗಿ ತಿಳಿಸಿ ತನ್ನನ್ನು ಕರೆದೊಯ್ದು ಮೂಸ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ದೂರಿದ್ದಾಳೆ. ೨೦೧೮ ಜನವರಿ ೧ರಿಂದ ೨೦೧೯ ನವೆಂ ಬರ್ ೨೦ರ ಮಧ್ಯೆ ಗಲ್ಫ್ ಹಾಗೂ ಊರಿನಲ್ಲಾಗಿ ಹಲವು ಬಾರಿ ಕಿರುಕುಳ ನೀಡಿರುವುದಾಗಿ  ಯುವತಿ ದೂರಿದ್ದಾಳೆ.

NO COMMENTS

LEAVE A REPLY