ಪೊಲೀಸ್ ಶಸ್ತ್ರಾಸ್ತ್ರ ಕೇಂದ್ರದಿಂದ ಬಂದೂಕು, ಬುಲ್ಲೆಟ್‌ಗಳು ನಾಪತ್ತೆ

0
75

 

ತಿರುವನಂತಪುರ: ತಿರುವನಂತಪುರ ದಲ್ಲಿರುವ ಪೊಲೀಸ್ ಪ್ರಧಾನ ಕೇಂದ್ರದ ಸ್ಪೆಷಲ್ ಆರ್ಮ್ಡ್ ಫೋರ್ಸ್ ಬೆಟಾಲಿಯನ್‌ನ ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರದಿಂದ  ಭಾರೀ ಪ್ರಹಾರ ಸಾಮರ್ಥ್ಯ ಹೊಂದಿರುವ ೨೫ ಇನ್‌ಸಾಸ್ ೫.೫೬ ಎಂ.ಎಂ. ರೈಫಲ್‌ಗಳು, ೧೨,೦೬೧ ಗುಂಡುಗಳು ಮತ್ತು ಎ.ಕೆ.೪೭ ಬಂದಕಿನ ಗುಂಡುಗಳು ನಾಪತ್ತೆಯಾಗಿರುವು ದಾಗಿ ಸಿ.ಎ.ಜಿ ವರದಿಯಲ್ಲಿ ಬಹಿರಂ ಗಪಡಿಸಲಾಗಿದೆ. ಬಂದೂಕುಗಳ ಗುಂಡುಗಳನ್ನು ಸಾಗಿಸಿದವರು ಅದರ ಬದಲಾಗಿ ನಕಲಿ ಗುಂಡುಗಳನ್ನು ತಂದಿರಿಸಿದ್ದಾರೆಂದೂ, ಪರ್ಚೇಸ್ಟ್ ನಿಬಂಧನೆಗಳನ್ನು ಪಾಲಿಸದೆ ೧.೧೦ ಕೋಟಿ ರೂ. ವ್ಯಯಿಸಿ ಎರಡು ಬುಲ್ಲೆಟ್ ಪ್ರೂಫ್ ಕಾರು ಖರೀದಿ ಇತ್ಯಾದಿ ಅವ್ಯವಹಾರಗಳನ್ನು ನಡೆಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ಪೊಲೀಸ್ ಸಿಬ್ಬಂದಿ ಗಳಿಗೆ ಕ್ವಾರ್ಟರ್ಸ್ ನಿರ್ಮಿಸಲು ಕೇಂದ್ರ ಸರಕಾರ ಮಂಜೂರು ಮಾಡಿದ ೪.೩೫ ಕೋಟಿ ರೂ.ವನ್ನು   ಅದಕ್ಕಾಗಿ ಬಳಸದೆ ಅದನ್ನು ರಾಜ್ಯ ಪೊಲೀಸ್ ಮುಖ್ಯಸ್ಥರ ಒಂದು ಐಷಾರಾಮಿ ವಸತಿ ಮತ್ತು ಕ್ಯಾಂಪ್ ಹೌಸ್, ಹಿರಿಯ ಪೊಲೀಸ್ ಅಧಿಕಾರಿಗಳ ನಾಲ್ಕು ವಸತಿ ನಿರ್ಮಾಣಕ್ಕಾಗಿ ಬಳಸಲಾಗಿದೆ.

ನಾಪತ್ತೆಯಾದ ಗುಂಡುಗಳನ್ನು ಎ.ಕೆ.೪೭ ಬಂದಕಿನ ೧೫೭೮ ಬುಲ್ಲೆ ಗಳು, ಸೆಲ್ಫ್ ಲೋಡಿಂಗ್ ರೈಫಲ್ಸ್‌ನ ೮೩೯೮ ಬುಲ್ಲೆಟ್‌ಗಳು ಮತ್ತು ೯ ಎಂ.ಎಂ.೨೫೦ ಬುಲ್ಲೆಟ್ ಗಳು ಒಳ ಗೊಂಡಿವೆ. ರಾಜ್ಯದ ಐದು ಪೊಲೀಸ್ ಠಾಣೆಗಳಿಗೆ ವಾಹನಗಳನ್ನು,  ಡಿಜಿಪಿ ಮತ್ತು ಎಡಿಜಿಪಿಗಳಿಗೆ ಆಡಂಬರ ಕಾರುಗಳನ್ನು ಖರೀದಿಸಲಾಗಿದೆ.

ಶಸ್ತ್ರಾಸ್ತ್ರ ದಾಖಲುಪತ್ರಗಳನ್ನು ಸರಿಯಾಗಿ ನೋಂದಾಯಿಸಲಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ಇದು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಆರೋಪದ ಸುಳಿಯಲ್ಲಿ ಸಿಲುಕುವಂತೆಯೂ ಮಾಡಿದೆ. ರಾಜ್ಯ ಪೊಲೀಸ್ ಇಲಾಖೆಗೆ ಶಸ್ತ್ರಾಸ್ತ್ರ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಟಿ.ಪಿ. ಸೆನ್ ಕುಮಾರ್ ಎರಡು ವರ್ಷಗಳ ಹಿಂದೆಯೇ ಆರೋಪಿಸಿದ್ದರು.

NO COMMENTS

LEAVE A REPLY