ಸಿಂಸ್ಸ್ ಯೋಜನೆ: ಸರಕಾರಿ ನಿರ್ದೇಶ ಗಾಳಿಗೆ ತೂರಿ ಖಾಸಗಿ ಕಂಟ್ರೋಲ್ ರೂಂ; ಶಂಕೆಯ ನೆರಳಲ್ಲಿ

0
75

ತಿರುವನಂತಪುರ: ರಾಜ್ಯದಲ್ಲಿ ಖಾಸಗಿ ಕಂಟ್ರೋಲ್ ರೂಂ ಮೂಲಕ ಸಂಸ್ಥೆಗಳ ಮೇಲೆ ಪೂರ್ಣ ಸಮಯ ನಿಗಾ ಇರಿಸಲು ಏರ್ಪಡಿ ಲಾದ ಸಿಂಸ್ಸ್ ಯೋಜನೆ ಈಗ ಶಂಕೆಯ ನೆರಳಲ್ಲಿ ಸಿಲುಕಿಕೊಂಡಿದೆ.

ಪೊಲೀಸರಿಗೆ ಯಾವುದೇ ರೀತಿಯ ಹೊರೆ ಉಂಟಾಗದ ರೀತಿಯಲ್ಲಿ  ಇಂತಹ ಖಾಸಗಿ ಕಂಟ್ರೋಲ್ ರೂಂ ನಡೆಸಬೇಕೆಂಬ ಗೃಹಖಾತೆ ಕಾರ್ಯದರ್ಶಿ ನೀಡಿದ್ದರು. ಆ ಯೋಜನೆಯಲ್ಲಿ ಈಗ ಅವ್ಯವಹಾರ ಪತ್ತೆಯಾಗಿದೆ.

ಪೊಲೀಸ್ ಪ್ರಧಾನ ಕೇಂದ್ರದಲ್ಲಿ ಕೆಲ್ಟ್ರೋನ್‌ಗೆ ಪ್ರತ್ಯೇಕ ಸ್ಥಳ ಮಂಜೂರು ಮಾಡಿ, ಖಾಸಗಿ ಕಂಟ್ರೋಲ್ ರೂಂ ಆರಂಭಿಸಲು ತೀರ್ಮಾನಿಸಲಾಗಿತ್ತು.  ಇದರಂತೆ ಬ್ಯಾಂಕ್ ಮತ್ತಿರ ಖಾಸಗಿ ಸಂಸ್ಥೆಗಳ ಭದ್ರತೆಯ ಹೊಣೆಗಾರಿಕೆಯನ್ನು ಈ ದಿನವಿಡೀ ಕಂಟ್ರೋಲ್ ರೂಂಗೆ ವಹಿಸಿಕೊಡಲಾಗಿತ್ತು. ಅದಕ್ಕಾಗಿ ಇಂತಹ  ಸಂಸ್ಥೆಗಳು ನಿಗದಿತ ಪ್ರಮಾಣದ ಶುಲ್ಕವನ್ನು ಕೆಲ್ಟ್ರೋನ್‌ಗೆ ಪಾವತಿಸಬೇಕು. ಇಂತಹ ಸಂಸ್ಥೆಗಳಲ್ಲಿ ಕಳವು, ದರೋಡೆ ಇತ್ಯಾದಿಗಳನ್ನು   ತಡೆಗಟ್ಟಲು ದೈನಂದಿನ ೨೪ ತಾಸು ತೀವ್ರ ನಿಗಾ ಇರಿಸುವ ಹೊಣೆಗಾರಿಕೆ ಈ ಕಂಟ್ರೋಲ್ ರೂಂಗೆ ವಹಿಸಿಕೊಡಲಾಗಿತ್ತು.

ಆದರೆ ಕೆಲ್ಟ್ರೋನ್ ಈಗ ಹೊಣೆಗಾರಿಕೆಯನ್ನು ಇತರ ಖಾಸಗಿ ಸಂಸ್ಥೆಯೊಂದಕ್ಕೆ ಉಪಗುತ್ತಿಗೆ  ರೂಪದಲ್ಲಿ ನೀಡಿದೆ. ಆದರೆ ಅದರೊಂದಿಗೆ ಸಹಕರಿಸಲು ಬ್ಯಾಂಕ್‌ಗಳಾಗಲೀ, ಇತರ ಸಂಸ್ಥೆಗಳಾಗಲೀ ತಯಾರಾಗಲಿಲ್ಲ. ಅಂತಹ ಹಂತದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮಧ್ಯ ಪ್ರವೇಶಿಸಿದ್ದರು. ಇಂತಹ ಸಂಸ್ಥೆಗಳನ್ನು ಈ ಯೋಜನೆಯೊಂದಿಗೆ ಸಹಕರಿಸಿ ಮುಂದಕ್ಕೆ ಸಾಗುವಂತೆ ಮಾಡುವ ನಿರ್ದೇಶವನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ  ನೀಡಿದ್ದರು.  ಅದರಂತೆ ಹಲವು ಸಂಸ್ಥೆಗಳು ಈ ಯೋಜನೆಯೊಂದಿಗೆ ಸಹಕರಿಸಲು ಮುಂದಾಗಿದ್ದವು.

ಇದೇ ವೇಳೆ ಈ ಕಂಟ್ರೋಲ್ ರೂಂನಲ್ಲಿ ಕೆಲ್ಟ್ರೋನ್ ಸಂಸ್ಥೆಯ ಸಿಬ್ಬಂದಿಗಳನ್ನೇ ನೇಮಿಸಬೇಕೆಂಬ ಗೃಹಖಾತೆ ಕಾರ್ಯದರ್ಶಿ ನೀಡಿದ್ದ ನಿರ್ದೇಶವನ್ನು ಗಾಳಿಗೆ ತೂರಿ ಪೊಲೀಸರನ್ನು ನೇಮಿಸಲಾಗಿದೆ.   ಒಂದು ಸ್ಥಳದಲ್ಲಿ ನಾಲ್ಕು ಕ್ಯಾಮರಾ ಗಳು ಸೆನ್ಸರ್‌ಗಳನ್ನು ಸ್ಥಾಪಿಸಲು ೮೦,೦೦೦ ರೂ. ದರ ನಿಗದಿಪಡಿಸಲಾ ಗಿತ್ತು. ಇದರ ಶೇ. ೧೩ರಷ್ಟು ಮೊತ್ತ ವನ್ನು ಪೊಲೀಸರಿಗೆ, ಶೇ. ೮೭ರಷ್ಟು ಮೊತ್ತವನ್ನು  ಕೆಲ್ಟ್ರೋನ್‌ಗೆ ನೀಡ ಬೇಕೆಂಬ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಆದರೆ ಈ ಕಂಟ್ರೋಲ್ ರೂಂ ನಡೆಸುವ ಹೊಣೆಗಾರಿಕೆಯನ್ನು ಈಗ ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟಿರುವುದು  ಭಾರೀ ವಿವಾದ ಮತ್ತು ಆರೋಪ ಗಳಿಗೆ ದಾರಿ ಮಾಡಿಕೊಟ್ಟಿದೆ.

NO COMMENTS

LEAVE A REPLY