ಪೊಲೀಸ್ ಕೇಂದ್ರದಿಂದ ಗುಂಡುಗಳು ನಾಪತ್ತೆ ಪ್ರಕರಣ: ಹತ್ತು ತಿಂಗಳ ಬಳಿಕ ಬಯಲು; ಸಚಿವ ಕಡಗಂಪಳ್ಳಿಯ ಅಂಗರಕ್ಷಕ ಸಹಿತ ಹನ್ನೊಂದು ಮಂದಿ ಆರೋಪಿಗಳು

0
66

ತಿರುವನಂತಪುರ: ತಿರುವನಂತಪು ರದ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಎಸ್‌ಎಪಿ) ಶಸ್ತ್ರಾಸ್ತ್ರ ದಾಸ್ತಾನು ಕೇಂದ್ರದಿಂದ ಬಂದೂಕುಗಳ ಗುಂಡುಗಳು ನಾಪತ್ತೆಯಾದ ಘಟನೆಗೆ ಸಂಬಂಧಿಸಿ ರಾಜ್ಯ ಸಹಕಾರಿ -ಮುಜರಾಯಿ ಖಾತೆ ಸಚಿವ ಕಡಗಂಪಳ್ಳಿ ಸುರೇಂದ್ರನ್‌ರ ಅಂಗರಕ್ಷಕ (ಗನ್‌ಮ್ಯಾನ್) ಸೇರಿದಂತೆ  ೧೧ ಮಂದಿ ವಿರುದ್ಧ ಚೇರೂರುಕಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ೧೦ ಮಂದಿ ಪೊಲೀಸರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಗುಂಡುಗಳು ನಾಪತ್ತೆಯಾದ ೧೦ ತಿಂಗಳ ಹಿಂದೆಯೇ ತನಿಖೆ ಆರಂಭಿಸ ಲಾಗಿತ್ತೆಂದೂ  ಅದು ಈಗಲೂ ಹಾಗೇ ನೆನೆಗುದಿಗೆ ಬಿದ್ದಿದೆ.

೧೯೯೬ರಿಂದ ೨೦೧೮ರ ಅವಧಿ ಯಲ್ಲಿ ಎಸ್‌ಎಪಿ ಕೇಂದ್ರದಿಂದ ಬಂ ದೂಕು ಗುಂಡುಗಳು ನಾಪತ್ತೆಯಾಗಿರು ವುದಾಗಿ  ಎಎಪಿಯ ಅಂದಿನ ಕಮಾಂ ಡೆಂಟ್ ಕ್ಸೇವಿಯರ್ ಹತ್ತು ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ೨೦೧೯ ಎಪ್ರಿಲ್ ೩ರಂದು ಚೇರೂರುಕಡ ಪೊಲೀಸರು ಆ ಬಗ್ಗೆ ಕೇಸು ದಾಖಲಿಸಿಕೊಂಡಿದ್ದರು. ಅದರ ಎಫ್‌ಐಆರ್‌ನಲ್ಲಿ ಸಚಿವ ಕಡಗಂಪಳ್ಳಿ ಸುರೇಂದ್ರನ್‌ರ ಅಂಗರಕ್ಷಕ ಸನಿಲ್ ಕುಮಾರ್‌ನನ್ನು ಮೂರನೇ ಆರೋಪಿಯಾಗಿ ಹೆಸರಿಸಲಾಗಿದೆ.  ಸನಿಲ್ ಕುಮಾರ್ ಅಂದು   ಎಸ್‌ಎಪಿ ಕೇಂದ್ರದ ಹವಾಲ್ದಾರ್ ಆಗಿದ್ದರು.  ಶಸ್ತ್ರಾಸ್ತ್ರ ಗೋದಾಮಿನ ರಕ್ಷಣಾ ಹೊಣೆ ಗಾರಿಕೆ ಅಂದು ಅವರು ಹೊಂದಿದ್ದರು. ಅತೀವ ಭದ್ರತೆ ಹಾಗೂ ತೀವ್ರ ನಿಗಾದೊಂದಿಗೆ ವ್ಯವಹರಿಸಬೇಕಾಗಿದ್ದ ಎ.ಕೆ.೪೭ ಬಂದೂಕುಗಳು ಮತ್ತಿತರ ಗುಂಡುಗಳಿಗೆ ಭದ್ರತೆ ಒದಗಿಸುವಲ್ಲಿ ತೀವ್ರ ನಿರ್ಲಕ್ಷ್ಯ ತೋರಲಾಗಿದೆಯೆಂದೂ ಗುಂಡುಗಳು ನಾಪತ್ತೆಯಾದುದನ್ನು ಆ ಕೇಂದ್ರದ ದಾಖಲುಪತ್ರಗಳಲ್ಲಿ ನೋಂದಾಯಿಸಲಾಗಿಲ್ಲವೆಂದು ಕೇಸಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಸರಿಯಾದ ಕರ್ತವ್ಯ ನಿಷ್ಠೆಯ ಕೊರತೆಯಿಂದಾಗಿ ಆ ವತಿಯಿಂದ ಸರಕಾರಕ್ಕೆ ಭಾರೀ ನಷ್ಟವುಂಟಾಗಿದೆಯೆಂದೂ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.  ಆ ಪ್ರಕರಣದ ತನಿಖೆಯನ್ನು ಬಳಿಕ ಕ್ರೈಂ ಬ್ರಾಂಚ್‌ಗೆ  ಹಸ್ತಾಂತರಿಸಲಾಗಿತ್ತು. ಇದೇ ವೇಳೆ ಈ ಪ್ರಕರಣದಲ್ಲಿ ಉನ್ನತರೂ ಶಾಮೀಲಾಗಿರುವ ಶಂಕೆಯೂ ವ್ಯಕ್ತಗೊಂಡಿದೆ.

ಈಬಗ್ಗೆ ಪ್ರಕರಣ ಹತ್ತು ತಿಂಗಳ ಹಿಂದೆಯೇ ದಾಖಲಿಸಿಕೊಂಡಿದ್ದರೂ ಅದನ್ನು ಬಹಿರಂಗಪಡಿಸದೆ ಈತನಕ ಗುಪ್ತವಾಗಿರಿಸಲಾಗಿತ್ತು. ಶಸ್ತ್ರಾಸ್ತ್ರದ ಬಗ್ಗೆ ಸಿಎಜಿ ವರದಿ ಮೊನ್ನೆ ಹೊರಬಂದಾ ಗಲೇ ಹತ್ತು ತಿಂಗಳ ಹಿಂದೆ ದಾಖಲಿಸಿ ಕೊಂಡಿದ್ದ ಕೇಸು ವಿಷಯ ಈಗಲಷ್ಟೇ  ಬಾಹ್ಯಪ್ರಪಂಚದ ಗಮನಕ್ಕೆ ಬಂದಿದೆ.

NO COMMENTS

LEAVE A REPLY