ಅಬಕಾರಿ ಅಧಿಕಾರಿಗಳನ್ನು ಕಂಡು ಪರಾರಿ ವೇಳೆ ಬೈಕ್ ಅಪಘಾತ: ಗಾಯಗೊಂಡ ಸವಾರ ಮೃತ್ಯು

0
59

ಕಾಸರಗೋಡು: ಅಬಕಾರಿ ಅಧಿಕಾರಿಗಳನ್ನು ಕಂಡು ಪರಾರಿಯಾಗುವ ವೇಳೆ ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಢಿಕ್ಕಿಹೊಡೆದ  ಪರಿಣಾಮ ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟರ.

ಕಾಸರಗೋಡು ಬೆದ್ರಡ್ಕ ನಿವಾಸಿ ಕುಮಾರ ಎಂಬವರ ಪುತ್ರ ನವೀನ (೩೦) ಮೃತಪಟ್ಟ ಯುವಕ. ಈ ತಿಂಗಳ ೯ರಂದು ಚೇವಾರಿನಲ್ಲಿ ಅಪಘಾತ ಸಂಭವಿಸಿದೆ.

ಅಬಕಾರಿ ಅಧಿಕಾರಿಗಳು ಅಂದು ರಾತ್ರಿ ವಾಹನದಲ್ಲಿ ಗಸ್ತ್ತು ತಿರುಗುತ್ತಿದ್ದಾಗ ಅವರನ್ನು ಕಂಡು ಬೈಕ್ ಅಪರಿಮಿತ ವೇಗದಲ್ಲಿ ಸಂಚರಿಸಿತ್ತು.  ಅದನ್ನು ಅಬಕಾರಿ ಅಧಿಕಾರಿಗಳು ಬೆನ್ನಟ್ಟಿದ್ದಾರೆನ್ನಲಾಗಿದೆ. ಈವೇಳೆ ಬೈಕ್ ನಿಯಂತ್ರಣತಪ್ಪಿ  ಚೇವಾರು ವೆಲ್ಫೇರ್ ಸೆಂಟರ್‌ನ ಗೋಡೆಗೆ ಢಿಕ್ಕಿ ಹೊಡೆದಿತ್ತು. ಈ ವೇಳೆ ರಸ್ತೆಗೆ ಬಿದ್ದ ನವೀನ ಗಂಭೀರ ಗಾಯಗೊಂಡಿದ್ದರು. ಈವೇಳೆ ಬೈಕ್‌ನಲ್ಲಿ ಮದ್ಯ ಪತ್ತೆಯಾಗಿತ್ತೆನ್ನಲಾಗಿದೆ.

ಅಬಕಾರಿ ಅಧಿಕಾರಿಗಳು  ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೀನ ಮೃತಪಟ್ಟಿದ್ದಾರೆನ್ನಲಾಗಿದೆ.

ಮೃತರು ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY