ಸ್ಕೂಟರ್‌ನಲ್ಲಿ ಮದ್ಯ ಸಾಗಾಟ: ಮಂಜೇಶ್ವರ ನಿವಾಸಿ ಪಾಲಕುನ್ನುನಲ್ಲಿ ಸೆರೆ

0
49

ಕಾಸರಗೋಡು: ಸ್ಕೂಟರ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ವೇಳೆ ಮಂಜೇಶ್ವರ ಬಳಿಯ ನಿವಾಸಿಯನ್ನು ಪಾಲಕುನ್ನು ನಲ್ಲಿ ಬೇಕಲ ಪೊಲೀಸರು ಬಂಧಿಸಿ ದ್ದಾರೆ.  ಹೊಸಬೆಟ್ಟು ಕೀರ್ತೇಶ್ವರ ನಿವಾಸಿ ಪ್ರಶಾಂತ್(೩೮) ಎಂಬಾತ ಬಂಧಿತ ವ್ಯಕ್ತಿ. ಈತನ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ೩೭೫ ಮಿಲ್ಲಿಯ ೩೧ ಬಾಟ್ಲಿ ಕರ್ನಾಟಕ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪಾಲ ಕುನ್ನುನಲ್ಲಿ ನಿನ್ನೆ ಬೇಕಲ ಪೊಲೀಸರು ವಾಹನ ತರಾಸಣೆ ನಡೆಸುತ್ತಿದ್ದಾಗ ಪ್ರಶಾಂತ್ ಸ್ಕೂಟರ್‌ನಲ್ಲಿ ಆಗಮಿಸಿ ದ್ದಾನೆ. ಸ್ಕೂಟರ್‌ನ್ನು ಪೊಲೀಸರು ತಪಾಸಣೆಗೈದಾಗ ಅದರಲ್ಲಿ ಮದ್ಯ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY