ಜುಗಾರಿ ನಿರತ ಐದು ಮಂದಿ ಸೆರೆ

0
44

ಕುಂಬಳೆ: ಜುಗಾರಿ ದಂಧೆಯಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಕುಂಬಳೆ ಪೊಲೀಸರು ನಿನ್ನೆ ಸೆರೆ ಹಿಡಿದಿದ್ದಾರೆ. ಕುಂಟಂಗೇರಡ್ಕ ಐ.ಎಚ್.ಆರ್.ಡಿ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಕೊಯಿಪ್ಪಾಡಿ ನಿವಾಸಿ ಅಬ್ದುಲ್ ಜಾಫರ್(೩೩), ಕುಂಟಂಗೇರಡ್ಕ ನಿವಾಸಿಗಳಾದ ಭರತ್(೨೪), ಕೊಗ್ಗು(೪೫), ಕೃಷ್ಣನ್(೪೨), ವೀರ ನಗರ ನಿವಾಸಿ ಮನೋಜ್ ಕುಮಾರ್ ಸೆರೆಯಾಗಿದ್ದಾ ರೆ. ಇವರಿಂದ ೬೫೧೦ ರೂ. ವನ್ನು ವಶಪಡಿಸಲಾಗಿದೆ. ಎಸ್.ಐ ಸಂತೋಷ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

NO COMMENTS

LEAVE A REPLY