ಕೊರೊನಾ: ಜಿಲ್ಲೆ ಸಂಪೂರ್ಣ ಸ್ತಬ್ದದತ್ತ

0
684

ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಆರು ಮಂದಿಗೆ ಮಹಾಮಾರಿ ಕೋವಿಡ್-೧೯ ತಗಲಿರುವುದು ದೃಢೀಕರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಸರಕಾರ ಜಿಲ್ಲೆಯಲ್ಲಿ ಇನ್ನಷ್ಟು ಕಠಿಣ ನಿಯಂತ್ರಣ ಹೇರಿದೆ. ಇದರಂತೆ ಎಲ್ಲಾ ಆರಾಧನಾಲಯಗಳನ್ನು ಮುಂದಿನ ಒಂದು ವಾರ ತನಕ ಮುಚ್ಚಬೇಕು. ವ್ಯಾಪಾರ ಸಂಸ್ಥೆಗಳು ಬೆಳಿಗ್ಗೆ ೧೧ರಿಂದ ಸಂಜೆ ೫ ಗಂಟೆ ಮಾತ್ರವೇ ತೆರೆದು ಕಾರ್ಯಾಚರಿ ಸಬೇಕು. ಸರಕಾರಿ ಕಚೇರಿಗಳಿಗೆ ಎರಡು ವಾರ ರಜೆ ಘೋಷಿಸಲಾಗಿದೆ. ಯಾವುದೇ ಕ್ಲಬ್‌ಗಳನ್ನು ಎರಡುವಾರ ತನಕ ತೆರೆಯಬಾರದು ಎಂಬಿತ್ಯಾದಿ ಕಠಿಣ ನಿರ್ದೇಶ ಸರಕಾರ ನೀಡಿದೆ. ಕೋವಿಡ್ ಆತಂಕ ಇನ್ನು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಬಸ್‌ಗಳು ಸೇವೆಗಳನ್ನು ಮೊಟಕು ಗೊ ಳಿಸಿದೆ. ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸೇವೆಗಳನ್ನೂ ಮೊಟಕುಗೊಳಿಸಿವೆ. ಇತರ ಖಾಸಗಿ ವಾಹನಗಳು ಹೆಚ್ಚಾಗಿ ರಸ್ತೆಗಿಳಿ ಯಲಿ ಲ್ಲ. ಟ್ಯಾಕ್ಸಿ ವಾಹನಗಳ ಸೇವೆಯ ಮೇಲೂ ಇದು ಪರಿಣಾಮ ಬೀರಿದೆ.

ನಿನ್ನೆ ಕೊರೊನಾ ಸೋಂಕು ದೃಢೀಕರಿಸಲ್ಪಟ್ಟ ಆರು ಮಂದಿಯಲ್ಲಿ ನಾಲ್ವರು ಮಾ. ೧೭ರಂದು ಕೊರೊನಾ ದೃಢೀಕರಿಸಲ್ಪಟ್ಟ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದವರಾ ಗಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆ ಯರು ಮತ್ತು ಎರಡು ವರ್ಷ ಪ್ರಾಯದ ಮಗುವೂ ಒಳಗೊಂಡಿದೆ. ಅವರನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.  ನಿನ್ನೆ ಇದೇ ಸೋಂಕು ದೃಢೀಕರಿಸಲ್ಪಟ್ಟ ಇತರ ಇಬ್ಬರು ೧೭ರಂದು ದುಬಾಯಿಂದ ಆಗಮಿಸಿದವರಾಗಿದ್ದಾರೆ. ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ಅವರಿಬ್ಬರು ೫೨ ಮತ್ತು ೨೭ ವರ್ಷ ಪ್ರಾಯದವರಾಗಿ ದ್ದಾರೆ. ಈ ಇಬ್ಬರು ದುಬಾಯಿಂದ ಊರಿಗೆ ಹಿಂತಿರುಗಿದ ಬಳಿಕ ನೂರಾರು ಮಂದಿ ಜತೆ ಸಂಪರ್ಕ  ಬೆಳೆಸಿದ್ದರು. ಸರಕಾರ ನೀಡಿದ ಕಠಿಣ ನಿರ್ದೇಶವನ್ನು ಪಾಲಿಸದಿರುವುದೇ ಸ್ಥಿತಿ ಇಷ್ಟೊಂದು ಗಂಭೀರಾವಸ್ಥೆಗೆ ತಲುಪಲು ಕಾರಣವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನೊ ಬಾಧಿತರ ಸಂಖ್ಯೆ ೯ಕ್ಕೇರಿದೆ.

NO COMMENTS

LEAVE A REPLY