ಉಪ್ಪಳ: ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ವಿವಿಧೆಡೆ ರಸ್ತೆ ಶೋಚನೀಯ ಸ್ಥಿತಿಗೆ ತಲುಪಿದೆ. ಉಪ್ಪಳ ಬಸ್ ನಿಲ್ದಾಣ ಸಹಿತ ಹೆದ್ದಾರಿ ಬದಿ ನೀರು ತುಂಬಿ ಕೊಂಡಿದೆ.ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ ಒಳರಸ್ತೆಯಲ್ಲಿ ಚರಂಡಿಯ ಅವ್ಯವಸ್ಥೆಯಿಂದಾಗಿ ಮಣ್ಣಿನ ರಸ್ತೆ ಕೆಸರುಮಯವಾಗಿದೆ. ಇದರಿಂದ ಇಲ್ಲಿನ ಕಾಂಕ್ರೀಟ್ ರಸ್ತೆಯಲ್ಲಿ ಕೆಸರು ನೀರು ಹರಿಯತೊಡಗಿದೆ. ಇದೇ ಪರಿಸರದ ರಾಘವೇಂದ್ರ ಹಾಗೂ ಸೇಸಪ್ಪ ಎಂಬವರ ಹಿತ್ತಿನಲ್ಲಿ ನೀರು ತುಂಬಿಕೊಂಡಿದೆ.