ಉಸಿರಾಟ ತೊಂದರೆ ಮಹಿಳೆ ಮೃತ್ಯು

0
16

ಉಪ್ಪಳ: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ನಿನ್ನೆ ಮೃತಪಟ್ಟರು. ಬಂದ್ಯೋಡು ಬಿಸಿರೋಡ್ ಹೇರೂರು ನಿವಾಸಿ ದಿವಾಕರ ಆಚಾರ್ಯರ ಪತ್ನಿ ಶೋಭಾ (೩೨) ನಿಧನ ಹೊಂದಿದವರು. ಇವರು ಮೊನ್ನೆ ಮಧ್ಯಾಹ್ನ ಊಟಮಾಡಿ ಮಲಗಿದ್ದಾಗ ಉಸಿರಾಟ ತೊಂದರೆ ಕಂಡುಬಂದಿದ್ದು, ಕೂಡಲೇ ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ಕೊಂಡುಹೋಗುತ್ತಿದ್ದ ಮಧ್ಯೆ ಮೃತಪಟ್ಟರು. ಮೃತದೇಹದ ಹೆಚ್ಚಿನ ತಪಾಸಣೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಹೊಂಡುಹೋಗಲಾಗಿದೆ.

ಮೃತರು ತಾಯಿ ಸುಶೀಲ, ಪತಿ, ಸಹೋದರ- ಸಹೋದರಿಯರಾದ ಮಾಲತಿ, ರಾಜೇಶ್ ಆಚಾರ್ಯ, ಹೇಮಲತಾ, ದಿನೇಶ್ ಆಚಾರ್ಯ, ರಾಮಚಂದ್ರ ಆಚಾರ್ಯ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY