ಮಾಸ್ಕ್ ಧರಿಸದೆ ರಸ್ತೆಗಿಳಿದ ೨೧ ಮಂದಿಗೆ ದಂಡ

0
21

ಕಾಸರಗೋಡು: ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೆ ಮನೆಯಿಂದ ಹೊರ ಬರುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರಗಿಸತೊಡಗಿದ್ದಾರೆ.

ಇದರಂತೆ ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯೊಳಗೆ ಮಾತ್ರವಾಗಿ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾಸ್ಕ್ ಧರಿಸದೆ ರಸ್ತೆಗಿಳಿದ ೨೧ ಮಂದಿಯಿಂದ ಜುಲ್ಮಾನೆ ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದ ಪ್ರತಿಯೋರ್ವರಿಂದ ತಲಾ ೫೦೦ ರೂ. ತನಕ ದಂಡ ವಸೂಲಿ ಮಾಡಲಾಗುತ್ತಿದೆ. ದಂಡ ತೆರಲು ಕೈಯಲ್ಲಿ ಹಣವಿರದ ವರಿಗೆ ರಶೀದಿ ನೀಡಲಾಗುತ್ತದೆ. ಅದನ್ನು ಅವರು ಬಳಿಕ ಆಯಾ ಪೊಲೀಸ್ ಠಾಣೆಗೆ ಬಂದು ಪಾವತಿಸುವ ಅವಕಾಶ ನೀಡಲಾಗುತ್ತಿದೆ. ಇಂತಹ ಕಾರ್ಯಾಚರಣೆ ರಾಜ್ಯ ದಾದ್ಯಂತವಾಗಿ ನಿನ್ನೆಯಿಂದ ಇನ್ನಷ್ಟು ಬಿಗಿಗೊಳಿಸಲಾಗಿದೆ.

ಮಾಸ್ಕ್ ಧರಿಸದೆ ಸಂಚಾರ ಮೂವರ ವಿರುದ್ಧ ಕೇಸು

ಉಪ್ಪಳ: ಮುಖಾವರಣ ಧರಿಸದೆ ಸಾರ್ವಜನಿಕವಾಗಿ ತಿರುಗಾಡುತ್ತಿದ್ದ ಮೂವರನ್ನು ಮಂಜೇಶ್ವರ ಎಸ್ ಐ ಸೆರೆಹಿಡಿದು ಕೇಸು ದಾಖಲಿಸಿದ್ದಾರೆ. ಚಿಪ್ಪಾರಿನಲ್ಲಿ ಸುತ್ತಾಡುತ್ತಿದ್ದ ಸ್ಥಳೀಯ ನಿವಾಸಿಗಳಾದ ಮೂರುಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY