ದಾಖಲೆಗಳಿಲ್ಲದೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ೭ ಲಕ್ಷ ರೂ. ವಶ

0
19

ಉಪ್ಪಳ: ದಾಖಲೆ ಪತ್ರಗಳಿಲ್ಲದೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ೭ ಲಕ್ಷ ರೂ.ವನ್ನು ಮಂಜೇಶ್ವರ ಪೊಲೀಸರು ವಶಪಡಿಸಿ, ಆರೋಪಿಯನ್ನು ಕಸ್ಟಡಿಗೆ ತೆಗೆದರು. ನಿನ್ನೆ ಸಂಜೆ ಕರ್ನಾಟಕ ಭಾಗದಿಂದ ಆಗಮಿಸುತ್ತಿದ್ದ ಸ್ಕೂಟರನ್ನು ತಡೆದುನಿಲ್ಲಿಸಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ೫೦೦ ರೂ.ಗಳ ಕಟ್ಟ ಕಂಡುಬಂದಿದೆ. ದಾಖಲೆಗಳಿಲ್ಲದ ಕಾರಣ ಸ್ಕೂಟರ್ ಹಾಗೂ ಹಣವನ್ನು ವಶಪಡಿಸಿದ್ದು, ಸವಾರ ಪಾವೂರು ನಿವಾಸಿ ಫಹಾದ್ (೨೨)ನನ್ನು ಕಸ್ಟಡಿಗೆ ತೆಗೆದರು.

NO COMMENTS

LEAVE A REPLY