ಪೊನ್ನಾನಿ ಅಪಘಾತದಲ್ಲಿ ಉಪ್ಪಳ ನಿವಾಸಿ ಮೃತ್ಯು: ಬೈಕ್‌ನಿಂದ ಗಾಂಜಾ ಪತ್ತೆ

0
29

ಉಪ್ಪಳ: ಉಪ್ಪಳದಿಂದ ಎರ್ನಾಕುಳಂಗೆ ಸಾಗುತ್ತಿದ್ದ ಬೈಕ್ ಹೆದ್ದಾರಿ ಬದಿ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದು ಉಂಟಾದ ಅಪಘಾ ತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ನಿನ್ನೆ ಮುಂಜಾನೆ ಪುದು ಪೊನ್ನಾನಿ ಚಾವಕ್ಕಾಡ್ ಹೆದ್ದಾರಿಯ ಪಾಲಪೆಟ್ಟಿ ಪುದಿಯ ತುರುತ್ತಿಯಲ್ಲಿ ಸಂಭವಿಸಿದೆ. ಬೈಕ್‌ನಿಂದ ೩ ಕಿಲೋ ಗಾಂಜಾವನ್ನು ವಶಪಡಿಸಲಾಗಿದೆಯೆಂದು ಪೆರುಂಬಡಪ್ಪ್ ಪೊಲೀಸರು ತಿಳಿಸಿದ್ದಾರೆ.

ಉಪ್ಪಳ ಪಚ್ಲಂಪಾರೆಯ ನಿವಾಸಿ ಪಾರವೀಟಿಲ್ ಮೊಹಮ್ಮದ್ ರಶೀದ್ (೨೮) ಮೃತಪಟ್ಟಿದ್ದು, ಸಹ ಸವಾರ ಜಮಾಲ್ ಗಾಯಗೊಂಡಿದ್ದಾರೆ. ಇವರಿಬ್ಬರೂ ಎರ್ನಾಕುಳಂನಲ್ಲಿ ಹಣ್ಣು ವ್ಯಾಪಾರಿಗಳಾಗಿದ್ದು, ಅಪ ಘಾತ ಸಂಭವಿಸಿದ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂ ಡೊಯ್ಯುತ್ತಿದ್ದ ದಾರಿ ಮಧ್ಯೆ ರಶೀದ್ ಮೃತಪಟ್ಟರು. ಜಮಾಲ್‌ನನ್ನು ಪೊನ್ನಾನಿಯ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.

ಕೋವಿಡ್ ತಪಾಸಣೆಯನ್ನು ಪೂರ್ತಿಗೊಳಿಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಮೃತದೇಹವನ್ನು ಇಂದು ಸಂಜೆ ಊರಿಗೆ ತಂದು ಅಂತ್ಯಕ್ರಿಯೆ ನಡೆಸಲಾಗುವುದು. ಮೃತ ರಶೀದ್ ತಂದೆ ಮೊಹಮ್ಮದ್ ಹನೀಫ್, ತಾಯಿ ಆಯಿಷಾ, ಸಹೋದರರಾದ ಸುಹೈಲ್, ಮೈ ಸೂಕ್, ಸಹೋದರಿ ಮೈಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY