ಎದೆನೋವು: ಬೆಳ್ಳೂರು ಪಂಚಾಯತ್ ಕಾರ್ಯದರ್ಶಿ ಮೃತ್ಯು

0
29

ಬೆಳ್ಳೂರು: ಬೆಳ್ಳೂರು ಪಂಚಾಯತ್ ಕಾರ್ಯದರ್ಶಿ ಪುಲ್ಲೂರು ಪೊಳ್ಳಕ್ಕಡ ಪ್ರಣವ್ ನಿವಾಸಿ ಎ. ದಾಮೋದರನ್ (೫೨) ನಿಧನಹೊಂದಿದರು.

೧೦ ದಿನದ ಹಿಂದೆ ಎದೆನೋವು ಕಂಡುಬಂದ ಹಿನ್ನೆಲೆಯಲ್ಲಿ  ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿದ್ದು,  ಇವರು ಶಸ್ತ್ರಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿದ್ದರು. ನಿನ್ನೆ ಸಂಜೆ ಮೃತಪಟ್ಟರು.

ಕಾಸರಗೋಡು ಪಂಚಾಯತ್  ಡೆಪ್ಯುಟಿ ಡೈರೆಕ್ಟರ್ ಕಚೇರಿಯಲ್ಲಿ ನೌಕರನಾಗಿದ್ದ ಇವರು ೧೦ ತಿಂಗಳ  ಹಿಂದೆ ಬೆಳ್ಳೂರು ಪಂಚಾಯತ್ ಕಾರ್ಯದರ್ಶಿಯಾಗಿ ಸೇವೆ ಆರಂ ಭಿಸಿದ್ದರು. ಪುಲ್ಲೂರು-ಪೆರಿಯ, ಕಳ್ಳಾರ್, ಮಂಜೇಶ್ವರ, ಮೊಗ್ರಾಲ್ ಪುತ್ತೂರು, ಅಜಾನೂರ್ ಪಂ ಚಾಯತ್‌ಗಳಲ್ಲೂ ಕರ್ತವ್ಯ ನಿರ್ವಹಿಸಿದ್ದರು.

ಪಂಚಾಯತ್ ನೌಕರನಾಗಿದ್ದ ದಿ| ರಾಘವರ ಪುತ್ರನಾಗಿದ್ದಾರೆ. ಮೃತರು ತಾಯಿ ಸಾವಿತ್ರಿ, ಪತ್ನಿ ಲೀನಾ (ಕಾಸರಗೋಡು ಲೋಕೋಪಯೋಗಿ ರಸ್ತೆ ವಿಭಾಗ ಓವರ್‌ಸೀಯರ್), ಮಕ್ಕಳಾದ ಭಾಗ್ಯಲಕ್ಷ್ಮಿ, ಪೆರಿಯ ಎಸ್.ಎನ್. ಕಾಲೇಜು ವಿದ್ಯಾರ್ಥಿನಿ), ಶ್ರೀಹರಿ (ವಿದ್ಯಾರ್ಥಿ), ಸಹೋದರ-ಸಹೋದರಿಯರಾದ ಚಂದ್ರಿಕಾ, ರಾಧಿಕಾ, ಜಯಚಂದ್ರನ್, ಶ್ರೀಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY