ಲಾಕ್ ಡೌನ್ ಉಲ್ಲಂಘನೆ: ಮಾಸ್ಕ್ ಧರಿಸದವರ ವಿರುದ್ಧ ಕೇಸು

0
14

ಕಾಸರಗೋಡು: ಮಾಸ್ಕ್ ಧರಿಸದೆ ಇದ್ದ ಆರೋಪದಲ್ಲಿ ಜಿಲ್ಲೆಯಲ್ಲಿ ಕಳೆದ ೨೦ರಂದು ೩೩೦ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರಿಂದ ದಂಡವಾಗಿ ೫೦೦ ರೂ.ನಂತೆ ಒಟ್ಟು ೧,೬೫,೦೦೦ ರೂ. ವಶಪಡಿಸಲಾಗಿದೆ.

ಇದೇ ರೀತಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ೪ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಮೂವರನ್ನು ಬಂಧಿಸಿ, ೪ ವಾಹನ ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ೨, ವಿದ್ಯಾನಗರ, ಹೊಸದುರ್ಗಗಳಲ್ಲಿ ಒಂದೊಂದು ಕೇಸು ದಾಖಲಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಇದುವರೆಗೆ ೨೩೫೬ ಮಂದಿ ವಿರುದ್ಧ ಕೇಸು, ೩೦೦೩ ಮಂದಿಯನ್ನು ಸೆರೆಹಿಡಿದು೯೫೫ ವಾಹನಗಳನ್ನು ವಶಪಡಿಸಲಾಗಿದೆ.

NO COMMENTS

LEAVE A REPLY