ಕೋವಿಡ್: ತೃಕರಿಪುರ ನಿವಾಸಿ ದುಬಾಯಲ್ಲಿ ಮೃತ್ಯು

0
16

ಹೊಸದುರ್ಗ: ಕೋವಿಡ್ ಬಾಧಿಸಿ ಎರಡು ವಾರಗಳಿಂದ ಚಿಕಿತ್ಸೆಯಲ್ಲಿದ್ದ ತೃಕ್ಕರಿಪುರ ಉಡುಂಬುಂತಲ ನಿವಾಸಿ ಒ.ಟಿ. ಅಸ್ಲಾಂ (೨೮) ದುಬಾಯ ಖುಸೈಸ್ ಆಸ್ಟರ್ ಹಾಸ್ಪಿಟಲ್‌ನಲ್ಲಿ ಮೃತಪಟ್ಟರು. ಮೃತದೇಹದ ಅಂತ್ಯ ಸಂಸ್ಕಾರ ದುಬಾಯಲ್ಲೇ ನಡೆಯಲಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ. ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ಇವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅನಂತರ ಕೋವಿಡ್ ಬಾಧಿಸಿರುವುದು ದೃಢಗೊಂಡಿತ್ತು.

ಉಡುಂಬುತಲ ಸರಕಾರಿ ಶಾಲೆ ಸಮೀಪ ನಿವಾಸಿಯಾದ ಅಸ್ಲಾಂ ಅವರು ತಂದೆ ಅಬ್ದುಲ್ಲ, ತಾಯಿ ರಸಿಯ ಟೀಚರ್, ಪತ್ನಿ ಶಹನಾಸ್, ಪುತ್ರ ಸಲಾಹ್, ಸಹೋದರಿಯರಾದ ಒ.ಟಿ. ತಸ್ಲೀಮ, ಒ.ಟಿ. ಖದೀಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತ್ತೀಚೆಗೆ ಕೋವಿಡ್ ಬಾಧಿಸಿ ಸೂರ್ಲು ಬಟ್ಟಂಪಾರೆ ನಿವಾಸಿ ಮಧುಸೂದನ ಎಂಬವರೂ ದುಬಾಯಲ್ಲಿ  ಮೃತಪಟ್ಟಿದ್ದರು.

NO COMMENTS

LEAVE A REPLY