ಪಂಜಿಕಲ್ಲು-ಜಾಲ್ಸೂರು ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ-ಶಂಕೆ

0
15

ಕೊಟ್ಯಾಡಿ: ದೇಲಂಪಾಡಿ ಪಂಜಿಕಲ್ಲು-ಜಾಲ್ಸೂರು ರಸ್ತೆ ಜಂಕ್ಷನ್‌ನಲ್ಲಿ ಕಳೆದ ಮೂರು  ದಿನಗಳಿಂದ ಹುಲಿಯಂತಿರುವ ಪ್ರಾಣಿ ಪ್ರತ್ಯಕ್ಷಗೊಂಡಿರುವುದಾಗಿ ಹೇಳಲಾಗುತ್ತಿದೆ.  ರಾತ್ರಿ ಹೊತ್ತಿನಲ್ಲಿ ಈ ರಸ್ತೆಯಲ್ಲಿ ವಾಹನಗಳಲ್ಲಿ ಪ್ರಯಾಣಿಸಿದವರು ಪ್ರಾಣಿಯನ್ನು ಕಂಡಿದ್ದಾರೆನ್ನಲಾಗುತ್ತಿದೆ.  ಕೊರೊನಾ ಹಿನ್ನೆಲೆಯಲ್ಲಿ ಹೇರಿದ ನಿಯಂತ್ರಣ ದಿಂದಾಗಿ ವಾಹನ, ಜನಸಂಚಾರ ಕಡಿಮೆಯಾದುದರಿಂದ ಕರ್ನಾಟಕ ಅರಣ್ಯದಿಂದ ಈ ಪ್ರಾಣಿ ರಸ್ತೆಗಿಳಿದಿ ರುವುದಾಗಿ ನಾಗರಿಕರು ಹೇಳುತ್ತಿದ್ದಾರೆ.

ಪಂಜಿಕಲ್ಲು-ಜಾಲ್ಸೂರು ರಸ್ತೆಯ  ಮೈಕ್ರೋ ಎಂಬಲ್ಲಿ ಈ ಪ್ರಾಣಿ ಕಂಡಿರುವುದಾಗಿ ಹೇಳಲಾಗುತ್ತಿದೆ. ಈ ರಸ್ತೆಯ ಒಂದು ಭಾಗ ಕರ್ನಾಟಕ ಅರಣ್ಯ ಮತ್ತೊಂದು ಭಾಗ ಕೇರಳ ಅರಣ್ಯವಾಗಿದೆ.

NO COMMENTS

LEAVE A REPLY