ಕೊರೊನಾ: ರಾಜ್ಯದಲ್ಲಿ ಸಾವಿನ ಸಂಖ್ಯೆ ೪ಕ್ಕೆ

0
22

ತೃಶೂರು: ಕೋವಿಡ್-೧೯ ಸೋಂಕಿಗೆ ರಾಜ್ಯದಲ್ಲಿ ಇನ್ನೋರ್ವ ಬಲಿಯಾಗಿದ್ದಾರೆ.

ತೃಶೂರು ಚಾವಕ್ಕಾಡ್ ಕಡಪ್ಪುರ ಅಂಙಾಡಿಯ ದಿ| ಮೊಹಮ್ಮದ್ ಪೊಕ್ಕಾ ಇಲ್ಲತ್ತ್ ಎಂಬವರ ಪತ್ನಿ ಖದೀಜಾ ಕುಟ್ಟಿ (೭೩) ಸಾವನ್ನಪ್ಪಿದ ಮಹಿಳೆ. ಇದರೊಂದಿಗೆ ಕೋವಿಡ್-೧೯ ರಾಜ್ಯಕ್ಕೆ ಪಸರಿಸಿದ ಬಳಿಕ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ.

ಮುಂಬೈಯಲ್ಲಿರುವ ಮಕ್ಕಳ ಮನೆಗೆ ಮೂರು ತಿಂಗಳ ಹಿಂದೆ ಹೋಗಿದ್ದ ಖದೀಜಾ ಕುಟ್ಟಿ ಬಳಿಕ ಲಾಕ್ ಡೌನ್ ನಿಂದಾಗಿ  ಊರಿಗೆ ಹಿಂತಿರುಗಲು ಸಾಧ್ಯ ವಾಗದೆ ಅಲ್ಲೇ  ಉಳಿದುಕೊಂಡಿದ್ದರು. ಅವರು ಮಧುಮೇಹ ರೋಗದಿಂದ ಬಳಲುತ್ತಿದ್ದರು. ಬಳಿಕ ಕೆಲವು ದಿನಗಳ ಹಿಂದೆ ಒಟ್ಟಪಾಲಂ ನಿವಾಸಿಯೋರ್ವರ ಕಾರಿನಲ್ಲಿ ಅವರು ಊರಿಗೆ ಹಿಂತಿರುಗಿದ್ದು ನಂತರ ಅವರನ್ನು ಚಾವಕ್ಕಾಡ್  ತಾಲೂಕು ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗ ಅವರಿಗೆ ಕೊರೊನಾ ಸೋಂಕು ತಗಲಿರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ  ಸಾವನ್ನಪ್ಪಿದ್ದಾರೆ. ಬಳಿಕ ಕೋವಿಡ್ ಪ್ರೊಟೋ ಕಾಲ್ ಅನುಸರಿಸಿ, ಆರೋಗ್ಯ ಇಲಾಖೆಯ ನೇತೃತ್ವದಲ್ಲಿ  ಮೃತದೇಹವನ್ನು ಇಂದು ಬೆಳಿಗ್ಗೆ ಸಂಸ್ಕರಿಸಲಾಯಿತು.

NO COMMENTS

LEAVE A REPLY