ಎಲ್ಲಾ ಸಾಲಗಳ ಬಡ್ಡಿ ದರ ಇಳಿಕೆ

0
33

ಹೊಸದಿಲ್ಲಿ: ಕೊರೊನಾದಿಂದಾಗಿ ದೇಶದಲ್ಲಿ ಲಾಕ್‌ಡೌನ್ ಜ್ಯಾರಿ ಗೊಳಿಸಿರುವುದರಿಂದ ಕೈಗಾರಿಕಾ ಉತ್ಪಾದನೆ ಶೇ. ೧೭ರಷ್ಟು ಕಡಿಮೆಯಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬೇಡಿಕೆ ಮತ್ತು ಪೂರೈಕೆ ಕುಸಿದಿದೆ. ಆ ಹಿನ್ನೆಲೆಯಲ್ಲಿ ಸೊರಗಿರುವ ದೇಶದಲ್ಲಿ ಆರ್ಥಿಕ ಪುನಶ್ಚೇತನಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಇಂದು ಬೆಳಿಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಹೊಸ ಟಾನಿಕ್ ನೀಡಿದ್ದಾರೆ.

ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುವ ಗೃಹಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲದ ಬಡ್ಡಿದರವನ್ನು ಇಳಿಸಲಾಗಿದೆ. ಇದು ಸಾಲ ಪಡೆಯಲು ಸಕಾಲವಾಗಿದೆಯೆಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

೪೦ ಬೇಸಿಸ್ ಪಾಯಿಂಟ್ ರಿಪೋ ದರ ಕಡಿತ ಮಾಡಲಾಗಿದೆ. ಶೇ. ೪.೪ರಷ್ಟಿದ್ದ ರಿಪೋ ದರ ಶೇ. ೪ಕ್ಕೆ ಇಳಿಸಲಾಗಿದೆ. ಆ ಮೂಲಕ ದೇಶದ ಪ್ರಜೆಗಳಿಗೆ ಗವರ್ನರ್ ಸಿಹಿ ಸುದ್ದಿ ನೀಡಿದ್ದಾರೆ.  

ಲಾಕ್‌ಡೌನ್‌ನಿಂದಾಗಿ ಒಟ್ಟಾರೆ ಆಮದು ಶೇ. ೫.೮ರಷ್ಟು ಕುಸಿತವುಂ ಟಾಗಿದೆ. ಇದೇ ವೇಳೆ ಆಹಾರಧಾನ್ಯ ಉತ್ಪಾದನೆ ಶೇ. ೩.೭ರಷ್ಟು ಹೆಚ್ಚಳ ವಾಗಿದೆ. ದೇಶದಲ್ಲಿ ಉತ್ತಮ ಮುಂಗಾರು ಆರಂಭದ ಮುನ್ಸೂಚನೆಯೂ ಲಭಿಸಿದೆ. ಕೃಷಿ ವಲಯದಲ್ಲಿ ದೇಶದಲ್ಲಿ ಹೊಸ ಆಶಾ ಕಿರಣ ಮೂಡಿಸಿದೆ. ವಿದೇಶಿ ವಿನಿಮಯ ಸಂಗ್ರಹ ೯.೨ ಬಿಲಿಯನ್ ಡಾಲರ್‌ಗೇರಿದೆ. ಮಾರ್ಚ್ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆ ಶೇ. ೧೮ರಷ್ಟು ಕುಸಿದಿದೆ.

೨೦೨೦-೨೦೨೧ರ ವರೆಗೂ ಜಿಡಿಪಿ ಬೆಳವಣಿಗೆ ದರ ನಿರೀಕ್ಷೆಗಿಂತ ಕೆಳಗಿಳಿಯಲಿದೆ. ಕಳೆದ ೩೦ ವರ್ಷ ಗಳಲ್ಲಿ ರಫ್ತು ಭಾರೀ ಪ್ರಮಾಣದಲ್ಲಿ ಇಳಿದಿದೆ. 

ಬೇಳೆ ಕಾಳುಗಳ ಬೆಲೆ ಏರಿಕೆ ಅತಂಕ ಹುಟ್ಟಿಸುತ್ತಿದೆ. ಆಹಾರ ಹಣದುಬ್ಬರ ಶೇ. ೮.೬ರಷ್ಟು ಏರಿದೆಯೆಂದು ಗವರ್ನರ್ ತಿಳಿಸಿದ್ದಾರೆ.

ಜೂನ್ ೧ರಿಂದ ಅಗೋಸ್ತ್ ೩೧ರ ವರೆಗೆ ಮೂರು ತಿಂಗಳಕಾಲ ಐಎಂಐ ಪಾವತಿಯನ್ನು ಆರ್‌ಬಿಐ ವಿಸ್ತರಿಸಿದೆ. ಆರ್‌ಬಿಐ ರೇಟ್ ಕಡಿತ ಘೋಷಿಸಿರುವಂತೆಯೇ ಷೇರು ಮಾರುಕಟ್ಟೆಯಲ್ಲೂ ಇಂದು ಭಾರೀ ಚೇತರಿಕೆಯುಂಟಾಗಿದೆ. ಆರ್ ಬಿಐ ನಿಂದ ಮಧ್ಯಮ ವರ್ಗದವರಿಗೆ ರಿಲೀಫ್ ಲಭಿಸಿದೆ.

NO COMMENTS

LEAVE A REPLY