ಯಥಾಸ್ಥಿತಿಯತ್ತ ಮರಳಿದ ಕೋವಿಡ್ ಆಸ್ಪತ್ರೆ

0
19

ಕಾಸರಗೋಡು: ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಲಾಗಿದ್ದ ಕಾಸರಗೋಡು ಜನರಲ್ ಆಸ್ಪತ್ರೆ ಯಥಾ ಸ್ಥಿತಿಯತ್ತ ಮರಳುತ್ತಿದೆ. ಪ್ರತ್ಯೇಕ ಐಸೊಲೇಶನ್ ವಾರ್ಡ್‌ಗಳೊಂದಿಗೆ ಸಜ್ಜುಗೊಳಿಸಲಾಗಿದ್ದ ಆಸ್ಪತ್ರೆಗೆ ರಾಜ್ಯ ದಲ್ಲೇ ಗರಿಷ್ಠ ಸಂಖ್ಯೆಯ ಕೋವಿಡ್-೧೯ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ ಖ್ಯಾತಿ ಹೊಂದಿದೆ.

ಎರಡು ತಿಂಗಳ ಹಿಂದೆ ಕೋವಿಡ್ ಆಸ್ಪತ್ರೆಯಾಗಿ ಜನರಲ್ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿತ್ತು. ಈ ಕಾಲಾವಧಿ ಯಲ್ಲಿ ಇತರ ರೋಗಿಗಳ ಚಿಕಿತ್ಸೆಯನ್ನು ಸಂಪೂರ್ಣ ಕೈಬಿಡಲಾಗಿತ್ತು. ಮೇ ೧೦ರ ವೇಳೆಗೆ ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿ ಗಳೂ ಗುಣಮುಖರಾಗಿ ಮನೆಗೆ ತೆರ ಳಿದ್ದು, ಇದಾದ ಕೆಲವು ದಿವಸಗಳ  ನಂ ತರ ಆಸ್ಪತ್ರೆಯಲ್ಲಿ ಇತರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು.

ಯಥಾಸ್ಥಿತಿಯಲ್ಲಿ ಚಿಕಿತ್ಸೆ: ಪ್ರಸಕ್ತ ಜನರಲ್ ಆಸ್ಪತ್ರೆಯಲ್ಲಿ  ಈ ಹಿಂದಿನಂತೆ ರೋಗಿಗಳು ಚಿಕಿತ್ಸೆಗೆ ಆಗಮಿಸಲು ತೊಡಗಿದ್ದಾರೆ. ಸಾಮಾಜಿಕ ಅಂತರ ಪಾಲನೆ ಜತೆಗೆ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಆಗಮಿಸುವಂತೆ ತಾಕೀತು ನೀಡಲಾಗುತ್ತಿದೆ.

 

NO COMMENTS

LEAVE A REPLY