ಬೆಂಗಳೂರಿನಿಂದ ಗುಪ್ತವಾಗಿ ಮನೆಗೆ ತಲುಪಿದ ವ್ಯಕ್ತಿ ಸೆರೆ: ಮನೆಯಲ್ಲಿ ಕ್ವಾರಂಟೈನ್

0
27

ಮುಳ್ಳೇರಿಯ: ಬೆಂಗಳೂ ರಿನಿಂದ ಪಾಸ್ ಅಥವಾ ಯಾವುದೇ ದಾಖಲೆಗಳಿಲ್ಲದೆ ಮನೆಗೆ ತಲುಪಿದ ವ್ಯಕ್ತಿಯನ್ನು ಆದೂರು ಪೊಲೀಸರು ಬಂಧಿಸಿದರು. ಈತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಯಲ್ಲೇ ಕ್ವಾರಂಟೈನ್‌ನಲ್ಲಿರಿಸಿದ್ದಾರೆ.

ಅಡೂರು ದೇಲಂಪಾಡಿ ಬೆಲ್ತಾಜೆಯ ಅಜಿತ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಬೆಂಗಳೂರಿನಿಂದ ಸರಕು ಲಾರಿ, ಮತ್ತಿತರ ವಾಹನಗಳಲ್ಲಾಗಿ ಈಶ್ವರಮಂಗಲಕ್ಕೆ ತಲುಪಿದ ಈತ ಅಡೂರಿನ ಮನೆಗೆ ತಲುಪಿದ್ದಾನೆಂದು ಹೇಳಲಾಗುತ್ತಿದೆ. ಈಬಗ್ಗೆ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು.

NO COMMENTS

LEAVE A REPLY