ಮಸೀದಿಗೆ ಕಲ್ಲೆಸೆದು ಗಾಜು ಹಾನಿ: ಕೇಸು

0
22

ಮಂಜೇಶ್ವರ: ಮಸೀದಿಗೆ ಕಲ್ಲೆಸೆದು ಹಾನಿಗೊಳಿಸಿದ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೂಡಂಬೈಲ್ ಪುಳ್ಳರಕಟ್ಟ ಶಿಹಾಬುದ್ದೀನ್ ಎಜ್ಯುಕೇಶನ್ ಟ್ರಸ್ಟ್‌ನ ಮಸೀದಿಗೆ ಈ ತಿಂಗಳ ೨೪ರಂದು ರಾತ್ರಿ ಹಾಗೂ ಮರುದಿನ ಮುಂಜಾನೆ ಮಧ್ಯೆ ಕಲ್ಲೆಸೆಯಲಾಗಿರುವುದಾಗಿ ದೂರಲಾಗಿದೆ. ಕಲ್ಲೆಸೆತದಿಂದ ಕಿಟಕಿ ಗಾಜು ಹಾನಿ ಗೀಡಾಗಿದ್ದು, ಈ ಸಂಬಂಧ ಮಸೀದಿಯ ಪದಾಧಿಕಾರಿ ಅಹಮ್ಮದ್ ಮುಸ್ತಫ ನೀಡಿದ ದೂರಿನಂತೆ ಕೇಸು ದಾಖಲಿ ಸಿದ್ದಾರೆ. ಕಿಟಕಿ ಗಾಜು ಹಾನಿಯಿಂದ ೫ ಸಾವಿರ ರೂ. ನಷ್ಟ ಸಂಭವಿಸದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

NO COMMENTS

LEAVE A REPLY