ಜಿಲ್ಲೆಯಲ್ಲಿ ನಿನ್ನೆ ೧೪ ಮಂದಿಗೆ ಕೋವಿಡ್ : ೧೩ ಮಂದಿ ಮಹಾರಾಷ್ಟ್ರದಿಂದ ಬಂದವರು

0
24

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ ೧೪ ಮಂದಿಗೆ ಕೋವಿಡ್-೧೯ ಸೋಂಕು ಖಚಿತವಾಗಿದೆ. ೬ ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಸೋಂಕು ಖಚಿತಗೊಂಡವರಲ್ಲಿ ೧೩ ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರು. ಒಬ್ಬರುಕೊಲ್ಲಿ ರಾಷ್ಟ್ರದಿಂದ ಬಂದವರು. ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ೩೮ ವರ್ಷದ ಉದುಮ ನಿವಾಸಿಗೆ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ೮ ಮಂದಿ ಕುಂಬಳೆ ನಿವಾಸಿಗಳು. ಇಬ್ಬರು ವರ್ಕಾಡಿ ನಿವಾಸಿಗಳು. ವರ್ಕಾಡಿ, ಮೀಂಜ, ಉದುಮ, ಕುಂಬ್ಡಾಜೆ ನಿವಾಸಿಗಳಾದ ತಲಾ ಒಬ್ಬರು ರೋಗ ತಗಲಿದವರು. ಇವರಲ್ಲಿ ೬ ಮಂದಿ ಮೇ ೧೮ರಂದು ಮುಂಬಯಿಯಿಂದ ಆಗಮಿಸಿದವರು. ಇವರು ಕುಂಬಳೆ ನಿವಾಸಿಗಳಾದ ೫೭, ೬೨, ೫೨, ೬೦, ೨೬ ವರ್ಷದವರು. ಕುಂಬ್ಡಾಜೆ ನಿವಾಸಿ ೫೨ ವರ್ಷ  ಪ್ರಾಯದವರು. ಪುಣೆಯಿಂದ ಆಗಮಿಸಿದ ೩೩, ೪೫ ವರ್ಷದವರಿಗೆ ಸೋಂಕು ಖಚಿತವಾಗಿದೆ. ಮುಂಬಯಿಯಿಂದ ಬಂದ ೩೦, ೪೭ ವರ್ಷದ ಸಹೋದರರಿಗೆ, ಮುಂಬಯಿಯಿಂದ ಆಗಮಿಸಿದ ೫೪ ವರ್ಷದ ವರ್ಕಾಡಿ ನಿವಾಸಿಗೆ, ೫೦ ವರ್ಷದ ಮೀಂಜ ನಿವಾಸಿಗೆ, ಬೆಂಗಳೂರಿನಿಂದ ಆಗಮಿಸಿದ ೩೮ ವರ್ಷದ ಉದುಮ ನಿವಾಸಿಗೆ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ ನಿನ್ನೆ ೬ ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ನಗರಸಭೆಯ ನಿವಾಸಿ ೬೬ ವರ್ಷದ ವ್ಯಕ್ತಿಗೆ, ಪೈವಳಿಕೆ ನಿವಾಸಿಗಳಾದ ಒಂದೇ ಕುಟುಂಬದ ಸದಸ್ಯರಾದ ೫೦, ೩೫, ೮, ೧೧ ವರ್ಷದ ಮಂದಿ, ಕಳ್ಳಾರ್ ನಿವಾಸಿ ೨೬ ವರ್ಷದ ವ್ಯಕ್ತಿ ಗುಣಮುಖರಾದವರು. ಜಿಲ್ಲೆಯಲ್ಲಿ ೩೧೮೦ ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ ೨೫೮೯ ಮಂದಿ, ಆಸ್ಪತ್ರೆಗಳಲ್ಲಿ ೫೯೧ ಮಂದಿ ನಿಗಾದಲ್ಲಿದ್ದಾರೆ. ೨೧೩ ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ೬೨೧೭ ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ೫೬೧೭ ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. ೧೮೪ ಮಂದಿಯ ಫಲಿತಾಂಶ ಲಭಿಸಿಲ್ಲ.

NO COMMENTS

LEAVE A REPLY