ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ನ ಶೇಣಿ ಶಾಖೆ ಮೆನೇಜರ್ ಶಿವಪ್ಪ ಆಳ್ವ ನಿಧನ

0
20

ಪೆರ್ಲ: ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಶೇಣಿ ಶಾಖೆ ಮೆನೇಜರ್ ಕುದ್ವ ಶಿವಪ್ಪ ಆಳ್ವ (೫೪) ನಿಧನಹೊಂದಿದರು.

ಎದೆನೋವು ಉಂಟಾದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ೧೨ ಗಂಟೆಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಮುಂಜಾನೆ ನಿಧನ ಸಂಭವಿಸಿದೆ. ದಿ| ನೀಲಪ್ಪಾಡಿ ತಿಮ್ಮಣ್ಣ ಆಳ್ವ-ಕುದ್ವ ದೆಯ್ಯಕ್ಕು ದಂಪತಿಯ ಪುತ್ರನಾಗಿದ್ದಾರೆ. ಪತ್ನಿ ಪ್ರೇಮ. ಮಕ್ಕಳಿಲ್ಲ. ದಿವಂಗತರಾದ ಜಗನ್ನಾಥ ಆಳ್ವ, ನಾರಾಯಣ ಆಳ್ವ, ಸಹೋದರರಾಗಿ ದ್ದಾರೆ. ಶಿವಪ್ಪ ಆಳ್ವರ ನಿಧನಕ್ಕೆ ಇಂದು ಬೆಳಿಗ್ಗೆ ನಡೆದ ಬ್ಯಾಂಕ್ ಆಡಳಿತ ಸಮಿತಿ ಸಭೆ ಸಂತಾಪ ಸೂಚಿಸಿದೆ. ಬ್ಯಾಂಕ್‌ನ ಸರ್ವ ತೋಮುಖ ಅಭಿವೃದ್ಧಿಗೆ ಶಿವಪ್ಪ ಆಳ್ವರು ನೀಡಿದ ಕೊಡುಗೆಗಳನ್ನು ಆಡಳಿತ ಸಮಿತಿ ಸದಸ್ಯರು ನೆನಪಿಸಿಕೊಂಡರು. ಬ್ಯಾಂಕ್‌ನ ಅಧ್ಯಕ್ಷ ಶಶಿಭೂಷಣ ಅಧ್ಯಕ್ಷತೆ  ವಹಿಸಿದರು.

ಶಿವಪ್ಪ ಆಳ್ವರ ನಿಧನಕ್ಕೆ ದುಃಖ ಸೂಚಿಸಿ ಬ್ಯಾಂಕ್‌ನ ಪ್ರಧಾನ ಕಚೇರಿ ಹಾಗೂ ನಾಲ್ಕು ಶಾಖೆಗಳಿಗೆ ಇಂದು ರಜೆ ನೀಡಲಾಗಿದೆ.

NO COMMENTS

LEAVE A REPLY