ಬವ್‌ಕ್ಯೂ ಆಪ್‌ನಲ್ಲಿ ಲೋಪ: ಸರಕಾರದ ಖಜಾನೆಗೆ ನಷ್ಟ

0
129

ಕೊಚ್ಚಿ: ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಮದ್ಯಕ್ಕಾಗಿ ಹಪಹಪಿಸುತ್ತಿದ್ದ ಪಾನಪ್ರಿಯರ ಆಸೆಗೆ ‘ಬವ್‌ಕ್ಯೂ’ ಎಂಬ ಆಪ್ ತಣ್ಣೀರೆರಚಿದೆ. ಆರ್ಕಿಟೆಕ್ಚರ್ ಮತ್ತು ಡಿಸೈನ್‌ನಲ್ಲಿ ಉಂಟಾಗಿರುವ ಲೋಪ ಬವ್‌ಕ್ಯೂ ಆಪ್‌ನ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆಯೆಂಬುದು ಆಪ್ ನಿರ್ಮಾಣ ತಜ್ಞರ ಅಭಿಪ್ರಾಯ. ಭಾರೀ ನಿರೀಕ್ಷೆಯೊಂದಿಗೆ ಆರಂಭಿಸಲಾದ ಬವ್‌ಕ್ಯೂ ಯೋಜನೆಯಲ್ಲಿನ ಲೋಪಗಳನ್ನು ಮೂಲದಲ್ಲೇ ಪತ್ತೆ ಹಚ್ಚುವುದರ ಜತೆಗೆ ಸಮಸ್ಯೆಗಳನ್ನು ಮುಂಚಿತವಾಗಿ ಅರಿತುಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಓಟಿಪಿ ವ್ಯವಸ್ಥೆಯಲ್ಲಿ ಇಂತಹ ಆಪ್ ಕೆಲಸ ಮಾಡಲು ಒಂದಷ್ಟು ಸಮಸ್ಯೆ ಎದುರಾಗಬಹುದು ಎಂಬುದನ್ನು ತಜ್ಞರು ಅರಿತುಕೊಳ್ಳದಿರುವುದೂ ವಿಪರ್ಯಾಸ. ಆಪ್ ಎಷ್ಟು ಚೆನ್ನಾಗಿ ಕೆಲಸ ನಿರ್ವಹಿಸಿದರೂ ನೆಟ್‌ವರ್ಕ್ ಪ್ರೊವೈಡರ್‌ಗಳ ನೆಟ್‌ವರ್ಕ್ ಕೂಡಾ ಅದೇ ಧಾರಣಾ ಶಕ್ತಿಯೊಂದಿಗೆ ಕಾರ್ಯಾಚರಿಸದಿದ್ದಲ್ಲಿ ಒಟ್ಟು ವ್ಯವಸ್ಥೆ ಪರಾಜಯಗೊಳ್ಳುವುದೆಂಬ ಸತ್ಯ ಕಂಡುಕೊಳ್ಳುವಲ್ಲೂ ಸಂಬಂಧಪಟ್ಟವರು ವಿಫಲರಾಗಿದ್ದಾರೆ ಎಂಬ ಆರೋಪವಿದೆ. ಸಾಕಷ್ಟು ಪೂರ್ವಭಾವಿ ತಯಾರಿ ನಡೆಸದೆ ಬಾವ್‌ಕ್ಯೂ ಆಪ್ ನಿರ್ಮಿಸಿರುವುದು ಈ ಅವಾಂತರಗಳಿಗೆ ಕಾರಣವಾಗಿದೆ. ಬವ್‌ಕ್ಯೂ ಆಪ್ ವೈಫಲ್ಯದಿಂದ ಸರಕಾರಕ್ಕೆ ಸುಮಾರು ೨೦೦ ಕೋಟಿ ರೂ. ನಷ್ಟ ಉಂಟಾಗಿದೆ.

NO COMMENTS

LEAVE A REPLY