ರಾಜ್ಯವ್ಯಾಪಕ ಮಳೆ: ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್

0
167

ಕಾಸರಗೋಡು: ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸ ಲಾಗಿದೆ. ರಾಜ್ಯದಲ್ಲಿ ಮಳೆ ಬಿರುಸುಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಹವಾಮಾನ ಇಲಾಖೆ ಬಿರುಸಿನ ಮಳೆ ಬರಲು ಸಾಧ್ಯತೆ ಇದೆಯೆಂದು ಎಚ್ಚರಿಕೆ ನೀಡಿದೆ.

ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಜಿಲ್ಲೆಗಳ ಕೆಲವೆಡೆ ೧೧೫ ಮಿ.ಮೀ. ವರೆಗಿನ ಮಳೆ ಹಾಗೂ ಇನ್ನೂ ಕೆಲವೆಡೆ ೨೦೪.೫ ಮಿ.ಮೀ. ವರೆಗೆ ಮಳೆ ಸುರಿಯಬಹುದೆಂದು  ನಿರೀಕ್ಷಿಸಲಾಗಿದೆ. ಗುಡ್ಡೆಗಳಿಂದ  ಬಂಡೆಕಲ್ಲು ಉರುಳುವ, ಮಣ್ಣು ಕುಸಿಯುವ ಸಾಧ್ಯತೆ ಇರುವ ಪ್ರದೇಶಗಳಲ್ಲದೆ ಭೂಮಿಯಲ್ಲಿ  ಬಿರುಕು ಕಾಣಿಸಿಕೊಂ ಡಿರುವ ಪ್ರದೇಶಗಳಲ್ಲಿ ವಾಸಿಸುವ ವರೂ ಜಿಲ್ಲಾಡಳಿತೆಯ ಆದೇಶ ಲಭಿಸಿದ ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಸೂಚಿಸಲಾಗಿದೆ.

NO COMMENTS

LEAVE A REPLY