ಲಾಕ್‌ಡೌನ್ ಉಲ್ಲಂಘನೆ: ವಿವಿಧ ಕೇಸು

0
12

ಕುಂಬಳೆ: ವ್ಯಾಪಾರ ಸಂಸ್ಥೆಗಳಲ್ಲಿ ಅಂತರ ಪಾಲಿಸದೆ ಜನರನ್ನು ಪ್ರವೇಶಿಸಿ ಲಾಕ್‌ಡೌನ್ ನಿಯಮವನ್ನು ಉಲ್ಲಂ ಘಿಸಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಕುಂಬಳೆ ಪೊಲೀಸರು ೫ ಮಂದಿ ವ್ಯಾಪಾ ರಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಮೊಗ್ರಾಲ್ ಪೇಟೆಯ ವ್ಯಾಪಾರಿ ನಿಸಾರ್ (೩೬), ಕುಂಬಳೆ ಪೇಟೆಯಲ್ಲಿ ವ್ಯಾಪಾರಿ ವಿಶ್ವನಾಥ ಟಿ (೩೨), ನಯಬಜಾರ್ ನ ಇಬ್ರಾಹಿಂ (೪೮), ಬಂದ್ಯೋಡಿನ ಅಬ್ದುಲ್ ಲತೀಫ್ (೩೬), ಬಂದ್ಯೋಡಿನಲ್ಲಿ ತರಕಾರಿ ವ್ಯಾಪಾರಿ ಅನ್ಸಾರ್ (೩೪) ಎಂಬವರ ವಿರುದ್ಧ ಕೇಸು ದಾಖಲಿಸಿದ್ದಾರೆ.

ಮಂಜೇಶ್ವರ: ಹೊಸಂಗಡಿ ಯಲ್ಲಿ ಜಿಮ್ ಸಂಸ್ಥೆಯಲ್ಲಿ ಅಂತರ ಪಾಲಿಸದೆ ವ್ಯಾಯಾಮ ಮಾಡುತ್ತಿದ್ದುದಕ್ಕೆ ಸಂಬಂಧಿಸಿ ಸಂಸ್ಥೆಯನ್ನು ನಡೆಸುತ್ತಿರುವ ಫರಾನ್ ಎಂಬವರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY