ವ್ಯಾಪಿಸುತ್ತಿರುವ ಕೋವಿಡ್: ಕಾಸರಗೋಡು ಸಹಿತ ೬ ಜಿಲ್ಲೆಗಳಲ್ಲಿ ಜಾಗ್ರತಾ ನಿರ್ದೇಶ

0
24

ಕಾಸರಗೋಡು: ವ್ಯಾಪಿಸುತ್ತಿರುವ ಕೋವಿಡ್-೧೯ ರೋಗ ಬಾಧೆ ತಡೆಗಟ್ಟುವ ನಿಟ್ಟಿನಲ್ಲಿ  ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಈ ನಿಟ್ಟಿನಲ್ಲಿ ಕಾಸರಗೋಡು ಒಳಗೊಂಡಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸಲು ಪೊಲೀಸರಿಗೆ ನಿರ್ದೇಶ ನೀಡಲಾಗಿದೆ. ಕಟ್ಟುನಿಟ್ಟಿನ ವಾಹನ ತಪಾ ಸಣೆಯೊಂದಿಗೆ ಮಾಸ್ಕ್ ಧರಿಸದವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳು ವಂತೆಯೂ ಸೂಚಿಸಲಾಗಿದೆ. ಮಾಸ್ಕ್ ಸಮರ್ಪಕವಾಗಿ ಧರಿಸದವರ ವಿರುದ್ಧವೂ ಕಾರ್ಯಾಚರಣೆಗೆ ಸೂಚಿಸಲಾಗಿದೆ.

ಇದುವರೆಗೆ ನಡೆಯುತ್ತಿದ್ದ ಜಾಗೃತಿ ಕಾರ್ಯಕ್ರಮ ಕೈಬಿಟ್ಟು, ಕಠಿಣ ಕ್ರಮಕ್ಕೆ ಮುಂದಾಗುವಂತೆ ಡಿಜಿಪಿ ಲೋಕನಾಥ ಬೆಹ್ರಾ ಪೊಲೀಸರಿಗೆ ನಿರ್ದೇಶ ನೀಡಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದಲ್ಲೂ ಕಟ್ಟುನಿಟ್ಟಿನ ನಿಯಂತ್ರಣ ಏರ್ಪಡಿಸಲಾಗಿದೆ. ಓ.ಪಿ. ಟಿಕೆಟ್,  ಪ್ರತ್ಯೇಕ ಪಾಸ್ ಇಲ್ಲದವರನ್ನು ಆಸ್ಪತ್ರೆಯೊಳಗೆ ಪ್ರವೇಶ ನಿರಾ ಕರಿಸಲಾಗುತ್ತಿದೆ.

NO COMMENTS

LEAVE A REPLY