ಕಾದಂಬರಿಗಾರ್ತಿ ಗೀತಾ ನಾಗಭೂಷಣ್ ನಿಧನ

0
14

ಬೆಂಗಳೂರು: ಕನ್ನಡದ ಹಿರಿಯ ಕಾದಂಬರಿಗಾರ್ತಿ,  ನಾಡೋಜ ಗೀತಾ ನಾಗಭೂಷಣ್ (೭೮) ನಿಧನಹೊಂದಿದರು. ಮಹಿಳಾಪರ ಲೇಖಕಿಯಾಗಿ ಗುರುತಿಸಿಕೊಂಡ ಇವರು ಗದಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.

ಕಲ್ಬುರ್ಗಿ ಜಿಲ್ಲೆಯಲ್ಲಿ ೧೯೪೨ ಮಾರ್ಚ್ ೨೫ರಂದು ಜನಿಸಿದ ಇವರು ಬಿಎ, ಬಿಎಡ್, ಎಂ.ಎ ಪದವಿಗಳನ್ನು ಗಳಿಸಿ ಅಧ್ಯಾಪಕಿಯಾ ಗಿದ್ದರು. ೧೯೬೮ರಲ್ಲಿ ಪ್ರಕಟಗೊಂಡ ತಾವರೆಯ ಹೂವು ಕಾದಂಬರಿ ಮೂಲಕ ಕಾದಂಬರಿ ಕ್ಷೇತ್ರದಲ್ಲಿ ಮಿನುಗಿದರು. ಅವರ ಕೊನೆಯ ಕಾದಂಬರಿ ‘ಬದುಕು’ ಆಗಿದ್ದು, ಇದುವರೆಗೆ  ಒಟ್ಟು ೨೭ ಕಾದಂಬರಿ ರಚಿಸಿದ್ದಾರೆ. ಬದುಕು ಕಾದಂಬರಿಗೆ ೨೦೦೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಕಾದಂಬರಿ ಅಲ್ಲದೆ ೫೦ ಸಣ್ಣಕಥೆ, ಎರಡು ಸಂಕಲನ, ೧೨ ನಾಟಕಗಳು, ಒಂದು ಸಂಪಾದನಾಕೃತಿ, ಒಂದು ಸಂಶೋಧನಾಕೃತಿ ಇವರ ಬರಹ ಗಳು. ಗುಲ್ಬರ್ಗ ವಿವಿಯಿಂದ ಡಾಕ್ಟ ರೇಟ್, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

NO COMMENTS

LEAVE A REPLY