ಬಾವಿಗೆ ಎಂಜಲು ಉಗುಳಿದ ಆರೋಪ: ಯುವಕನ ಬಂಧನ

0
20

ಬೇಕಲ: ಕೋವಿಡ್ ಬಾಧಿಸಿ ಚಿಕಿತ್ಸೆ ಯಲ್ಲಿದ್ದು, ಗುಣಮುಖನಾಗಿ ಆಗಮಿಸಿದ್ದ ಯುವಕನೊಬ್ಬ ನೆರೆಮನೆಯ ಯುವತಿಯ ಬಾವಿಗೆ ಎಂಜಲು ಉಗುಳಿದ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಉದುಮ ಉದಯಮಂಗಲ ನಿವಾಸಿ ಆನಂದವಲ್ಲಿ ಎಂಬವರ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಆರೋಪಿಯನ್ನು ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಯಿತು.   ಕೋವಿಡ್ ಬಾಧಿಸಿ ಗುಣಮುಖನಾಗಿ ಆಗಮಿಸಿದ ಯುವಕ ಹಾಗೂ ನೆರೆಮನೆ ನಿವಾಸಿ ಯುವತಿ ಮಧ್ಯೆ ಈ ಹಿಂದೆ ಜಾಗದ ಗಡಿ ತಕರಾರಿನ ಬಗ್ಗೆ ವ್ಯಾಜ್ಯ ಹೊಂ ದಿದ್ದರೆನ್ನಲಾಗಿದೆ. ಕೆಲವು ದಿನಗಳ ಹಿಂದೆ ಕೋವಿಡ್ ಚಿಕಿತ್ಸೆ ಕಳೆದು ಬಂದ ಯುವಕ ತಮ್ಮ ಮನೆ ಸನಿಹದ ಬಾವಿಗೆ ಎಂಜಲು ಉಗುಳುವ ಮೂಲಕ ಕಲುಷಿ ತಗೊಳಿಸಿರುವುದಲ್ಲದೆ ರೋಗ ಹರಡಲು  ಕಾರಣವಾಗಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY