ಕರ್ನಾಟಕದಿಂದ ಅನಧಿಕೃತವಾಗಿ ಬಂದ  ವ್ಯಕ್ತಿಯನ್ನು ಕರೆತರಲು ಯತ್ನಿಸಿದಾಗ ಸೆರೆ

0
11

ಬದಿಯಡ್ಕ: ಕೋವಿಡ್ ನಿಬಂಧನೆಗಳನ್ನು ಉಲ್ಲಂಘಿಸಿ ಸಾರಡ್ಕ ಮೂಲಕ ತಲುಪಿದ ಯುವಕನನ್ನು ಬೈಕ್‌ನಲ್ಲಿ ಊರಿಗೆ ತಲುಪಿಸಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆರ್ಕಳ ನಿವಾಸಿ ಕೆ.ಎಚ್. ಶರೀಫ್ (೩೧) ಬಂಧಿತವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ಕೇಸು ದಾಖಲಿಸಿದ ಬಳಿಕ ಬಿಡುಗಡೆಗೊಳಿಸಲಾಯಿತು. ಕರ್ನಾಟಕದ ವಿಟ್ಲದಿಂದ ಗಡಿ ಪ್ರದೇಶ ದಾಟಿ ಬಂದ ಸ್ನೇಹಿತನನ್ನು ಊರಿಗೆ ತಲುಪಿಸಲು ಈತ ಪ್ರಯತ್ನಿಸಿದ್ದು, ಈ ವೇಳೆ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY