ನಗರಸಭಾ ಕಚೇರಿಯ ಭದ್ರತೆಗಾಗಿ ಅಳವಡಿಸಿದ ಶೀಟ್ ಬಿದ್ದು ಓರ್ವ ಗಾಯ

0
10

ಕಾಸರಗೋಡು: ಕಾಸರಗೋಡು ನಗರಸಭಾ ಕಚೇರಿಯಸುರಕ್ಷತೆಗಾಗಿ ಕಟ್ಟಡದ ಮೇಲೆ ಸ್ಥಾಪಿಸಿದ್ದ ಶೀಟ್ ಛಾವಣಿಯಿಂದ ಕಳಚಿಬಿದ್ದು ಓರ್ವ ಗಾಯಗೊಂಡಿದ್ದಾನೆ. ವಿದ್ಯುತ್ ಗುತ್ತಿಗೆದಾರನಾದ ವಿದ್ಯಾನಗರ ಚಾಲ ನಿವಾಸಿ ಮುಹಮ್ಮದ್ (೬೩) ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರಸಭಾ ಕಚೇರಿಯಲ್ಲಿ ಇಂತಹ ಕೆಲಸ ನಿರ್ವಹಿಸಿದ ಗುತ್ತಿಗೆದಾರರು ಕಚೇರಿಯ ಹೊರಗೆ ನಗರಸಭೆಯ ಕಾಮಗಾರಿಗಳನ್ನು ಯಾವ ರೀತಿಯಲ್ಲಿ ನಿರ್ವಹಿಸುವರೆಂದು ಜನರು ಪ್ರಶ್ನಿಸಲಾರಂಭಿಸಿದ್ದಾರೆ.

NO COMMENTS

LEAVE A REPLY